ಅದ್ಯಾವ ಘಳಿಗೆಯಲ್ಲಿ ಆತ ಚಾಲಕ ನೌಕರಿಗೆ ಹತ್ತಿದ್ದಾನೋ ಏನೋ. ಸಿಕ್ಕ ನೌಕರಿಯಲ್ಲಿ ಜನರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಬೇಕಿದ್ದ ಆ ಬಸ್ಸಿನ ಚಾಲಕನಿಗೆ ರೀಲ್ ಮಾಡೋ ಹುಚ್ಚು ಇತ್ತು.
ರಿಯಲ್ ಲೈಫ್ ಎಂಜಾಯ್ ಮಾಡಬೇಕಿದ್ದ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕ ರಮೇಶ ಅಲವಾಲ್ ಎಂಬಾತ, ರೀಲ್ ಮಾಡೋಕೆ ಹೋಗಿ ಎರಡು ಎತ್ತಿನ ಪ್ರಾಣ ಕಿತ್ತುಕೊಂಡಿದ್ದಾನೆ.
ಹುಬ್ಬಳ್ಳಿಯಿಂದ ಇಂದು ಸಂಜೆ ವಿಜಯಪುರದತ್ತ ಹೊರಟಿದ್ದ ಬಸ್ಸು ಹುಬ್ಬಳ್ಳಿಯ ಕುಸುಗಲ್ ಬಳಿ ಚಕ್ಕಡಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಎತ್ತುಗಳು ಸಾವನ್ನಪ್ಪಿವೆ. ಬಸ್ಸಿನ ಚಾಲಕ ರಮೇಶ್ ಡೈಲಾಗ್ ಒಂದಕ್ಕೆ ಬಸ್ ಚಾಲನೆ ಮಾಡುತ್ತಾ, ನಟನೆ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಇತ್ತೀಚಿಗೆ ರೀಲ್ ಹುಚ್ಚು ಬಸ್ ಚಾಲಕರಿಗೂ ತಮಾಷೆಯ ಕೆಲಸವಾಗಿದ್ದು, ಧಾರವಾಡ ಡಿಪೋ ಚಾಲಕ ಅಮಾನತ್ತುಗೊಂಡಿದ್ದನ್ನ ಸ್ಮರಿಸಬಹುದು