ಧಾರವಾಡದ KPES ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯನ್ನು ಕಾರ್ತಿಕ ಮಟ್ಟಿ ಎಂಬ ಶಿಕ್ಷಕ, ಕೋಲಿನಿಂದ ಮನಬಂದಂತೆ ಥಳಿಸಿದ ಘಟನೆ ಇಂದು ನಡೆದಿದೆ.
ಪೋಷಕರು ಈ ಕುರಿತು ಕೇಳಿದಾಗ, ನಾನು ಹೊಡೆಯುವವನೇ. ಏನು ಮಾಡಿಕೊಳ್ತಿರೋ ಮಾಡಿಕೊಳ್ಳಿ, ನನ್ನ ವಿರುದ್ಧ ದೂರು ನೀಡಿದರೆ ನಿಮ್ಮ ಹುಡುಗ ಇದೇ ಶಾಲೆಯಲ್ಲಿ ಕಲಿಯಬೇಕು. ಅದರ ಬಗ್ಗೆಯೂ ಯೋಚನೆ ಮಾಡಿ ಎಂದು ಉದ್ದಟತನದ ಮಾತನ್ನ ಆಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಬಾಲಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳಿಸಲಾಗಿದೆ. ಶಿಕ್ಷಕನ ಥಳಿತಕ್ಕೆ ಬಾಲಕನ ಬೆನ್ನಿಗೆ ಬಲವಾದ ಪೆಟ್ಟು ಬಿದ್ದಿದೆ. ಬಾಲಕನಿಗೆ ತಂದೆ ಇಲ್ಲಾ ಎನ್ನಲಾಗಿದ್ದು, ತಾಯಿಯೇ ಮಗನಿಗೆ ಶಿಕ್ಷಣ ಕೊಡಿಸುತ್ತಿದ್ದಾಳೆ.
ಏಟು ತಿಂದ ಬಾಲಕನಿಗೆ, ಬದುಕು ಸಂಸ್ಥೆ ಬೆನ್ನಿಗೆ ನಿಂತಿದೆ.