ಮೊನ್ನೆ ನಡೆದ ನೀಟ್ ಪರೀಕ್ಷೆಯಲ್ಲಿ ಮುಧೋಳ ತಾಲೂಕಿನ ಹಿರೇಅಲಗುಂಡಿಯ ಗ್ರಾಮದ ಅಭಿಷೇಕ ಶಂಕ್ರಪ್ಪ ಚಿಪ್ಪಲಕಟ್ಟಿ ಎಂಬಾತ 720 ಕ್ಕೆ 700 ಅಂಕ ಪಡೆದಿದ್ದಾನೆ.
ಜಮಖಂಡಿ ತುಂಗಳ ಪಿಯು ಕಾಲೇಜ್ ನಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿರುವ ಅಭಿಷೇಕ ಇದೀಗ MBBS ಅಧ್ಯಯನ ಮಾಡಲಿದ್ದಾನೆ. ಬದಕುಟುಂಬದ ಹಿನ್ನೆಲೆಯಿಂದ ಬಂದ ಅಭಿಷೇಕನ ಸಾಧನೆ ಹಿಂದೆ ತಾಯಿ ಕಲಾವತಿಯ ದುಡಿಮೆ ಇದೆ.
ಕಲಾವತಿ ದಿನಕ್ಕೆ ಇನ್ನೂರು ರೊಟ್ಟಿ ಮಾಡಿ, ದುಡಿಮೆಯಿಂದ ಬಂದ ಹಣದಲ್ಲಿ ಅಭಿಷೇಕನಿಗೆ ಶಿಕ್ಷಣ ಕೊಡಿಸಿದ್ದಾಳೆ. ಕಲಾವತಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಓರ್ವ ಗಂಡು ಮಗುವಿದೆ. ಕಷ್ಟದಲ್ಲಿ ಮಗ ಅಭಿಷೇಕನಿಗೆ ಇಷ್ಟೊಂದು ಸಾಧನೆ ಮಾಡಲು ಆತನ ಹಿಂದೆ ಶಕ್ತಿಯಾಗಿ ನಿಂತ ತಾಯಿ ಕಲಾವತಿಗೆ ಒಂದು ದೊಡ್ಡ ಸಲಾಂ.