ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆಗಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ತಂದಿದ್ದ ಋಣಮುಕ್ತ ಕಾಯ್ದೆಗೆ ಕಾನೂನು ಸಂಘರ್ಷ ನಡೆದಿದೆ.
ಋಣಮುಕ್ತ ಕಾಯ್ದೆ ಜಾರಿಗೆ ತಡೆ ನೀಡಬೇಕೆಂದು ಲೇವಾದೇವಿ ಮಾಡುವವರ ಸಂಘ ಹೈಕೋರ್ಟನಲ್ಲಿ ತಡೆಯಾಜ್ಞೆ ತಂದಿದೆ. ಭೂ ಸುಧಾರಣೆ ಕಾಯಿದೆ ಮಾದರಿಯಲ್ಲೇ ಲೇವಾದೇವಿದಾರರಿಂದ ಗ್ರಾಮೀಣ ಭಾಗದ ಬಡ ಜನರ ರಕ್ಷಣೆಗೆ ‘ಋಣಮುಕ್ತ’ ಕಾಯಿದೆಯನ್ನು ಕುಮಾರಸ್ವಾಮಿಯವರ ನೇತೃತ್ವದ ಆಗಿನ ರಾಜ್ಯ ಸರ್ಕಾರ ಈ ಕಾಯ್ದೆ ಜಾರಿಗೆ ತಂದಿತ್ತು.
‘ಋಣಮುಕ್ತ’ ಮಸೂದೆಯನ್ನು ಸಿದ್ಧಪಡಿಸಿ ರಾಷ್ಟ್ರಪತಿಗೆ ಕಳುಹಿಸಲಾಗಿತ್ತು. ಈ ಮಸೂದೆಗೆ ಜುಲೈ 16ರಂದು ಆಗಿನ ರಾಷ್ಟ್ರಪತಿಗಳು ಸಹಿ ಮಾಡಿದ್ದರು.
ಭೂ ಸುಧಾರಣೆ ಕಾಯಿದೆ ಮಾದರಿಯಲ್ಲೇ ಲೇವಾದೇವಿದಾರರಿಂದ ಗ್ರಾಮೀಣ ಭಾಗದ ಬಡ ಜನರ ರಕ್ಷಣೆಗೆ ‘ಋಣಮುಕ್ತ’ ಕಾಯಿದೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಈ ಕಾಯ್ದೆ ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿತ್ತು.
ಬಡ್ಡಿಗೆ ಸಾಲಪಡೆದು ನೊಂದ ಬಡವರು 90 ದಿನಗಳ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಕುಮಾರಸ್ವಾಮಿಯವರು ಹೇಳಿದ್ದರು.
ಉಸ್ತುವಾರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ತಿಳಿಸಿದರು. ಆದರೆ ಮಸೂದೆ ಜಾರಿಗೆ ಬಂದ ಕೇವಲ 5 ತಿಂಗಳ ಅವಧಿಯಲ್ಲಿಯೇ ಹೈಕೋರ್ಟನಿಂದ ತಡೆಯಾಜ್ಞೆ ತಂದ ಪರಿಣಾಮ ಧಾರವಾಡ ಜಿಲ್ಲೆಯ ಮೂರು ಸಾವಿರ ಅರ್ಜಿಗಳಿಗೆ ವಿಘ್ನ ಎದುರಾಗಿದೆ.
