ಧಾರವಾಡ ಜಿಲ್ಲೆಯಲ್ಲಿ ಮಕ್ಕಳ ಉಲ್ಲಂಘನೆ ಪ್ರಕರಣಗಳು ಎಥಾವತ್ತಾಗಿ ನಡೆಯುತ್ತಲೆ ಇವೆ. ಅಂಗನವಾಡಿ ಮಕ್ಕಳಿಗೆ ಸರಿಯಾಗಿ ಆಹಾರ ನೀಡುತ್ತಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ.
ಇಲ್ಲಿ ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ನಿತ್ಯ ನಡೆಯುತ್ತಿದೆ. ಧಾರವಾಡ ಜಿಲ್ಲೆಯಲ್ಲಿ 1622 ಅಂಗನವಾಡಿಗಳಿದ್ದು, ಈ ಅಂಗನವಾಡಿಗಳಲ್ಲಿ ಒಂದು ಲಕ್ಷ 7 ಸಾವಿರ ಮಕ್ಕಳು ಕಲಿಯುತ್ತಿದ್ದಾರೆ.
ಬಾಲ್ಯ ವಿವಾಹ, ಶಿಕ್ಷಣ ನಿರಾಕರಣೆ, ಆರೋಗ್ಯ ನಿರಾಕರಣೆ, ಬಾಲ ಕಾರ್ಮಿಕ, ಲೈಂಗಿಕ ಶೋಷಣೆಯಂತಹ ಪ್ರಕರಣಗಳು ಧಾರವಾಡ ಜಿಲ್ಲೆಯಲ್ಲಿ ನಡೆದಿವೆ.
ಬಾಲ ಕಾರ್ಮಿಕರಿಗೆ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಎರಡು ತೆರೆದ ತಂಗುದಾನ ವ್ಯವಸ್ಧೆ ಮಾಡಲಾಗಿದ್ದು, ಇಲ್ಲಿ 14 ವರ್ಷದವರೆಗಿನ ಮಕ್ಕಳಿಗೆ ಪುನರವಸತಿ ಕಲ್ಪಿಸಿ, ಅವರಿಗೆ ಶಿಕ್ಷಣ ನೀಡಲಾಗುತ್ತದೆ.
ಧಾರವಾಡದಲ್ಲಿ ದರ್ಶನ ಹೆಸರಿನ ಪುನರವಸತಿ ಕೇಂದ್ರ, ನವನಗರದಲ್ಲಿ ಸ್ನೇಹಾ ಹೆಸರಿನ ತೆರೆದ ತಂಗುದಾನ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ರಾಜ್ಯ ಮತ್ತು ಹೊರ ರಾಜ್ಯದ ಮಕ್ಕಳು ಇದ್ದಾರೆ.
2023 ರ ವರೆಗೆ 147 ಬಾಲ ಕಾರ್ಮಿಕರ ಪ್ರಕರಣಗಳ ಪೈಕಿ ಕೇವಲ 73 ಮಕ್ಕಳನ್ನು ರಕ್ಷಿಸಿ ಅವರಿಗೆ ಪುನರವಸತಿ ಕಲ್ಪಿಸಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಬಾಲ್ಯ ವಿವಾಹದಂತಹ ಪ್ರಕರಣಗಳು ನಡೆಯುತ್ತಿದ್ದರು. ಮಕ್ಕಳ ಹಕ್ಕುಗಳ ಸಮಿತಿ ಎಚ್ಚರ ವಹಿಸಿದೆ. 2022 ರಲ್ಲಿ ವರದಿಯಾದ 23 ಪ್ರಕರಣಗಳ ಪೈಕಿ, 20 ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಲೈಂಗಿಕ ಕಿರುಕುಳದ 15, ಆರೋಗ್ಯ ಸೇವೆ ನಿರಾಕರಣೆಯ 80, ಶಿಕ್ಷಣ ನಿರಾಕರಣೆಯ 50, ಬಾಲ್ಯ ವಿವಾಹದ 8 ಪ್ರಕರಣಗಳು ನಡೆದಿವೆ.
ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರು ಕೇವಲ ಸಭೆ ಮಾಡಿ ಹೋದರೆ ಯಾವದೇ ಪ್ರಯೋಜನವಿಲ್ಲ ಅನ್ನೋದನ್ನ ಅರಿಯಬೇಕು. ಅಂಗನವಾಡಿಗಳಿಗೆ, ಬಾಲ ಕಾರ್ಮಿಕರು ಇರುವ ಕಡೆಗೆ ಭೇಟಿ ಕೊಟ್ಟು ಅಲ್ಲಿನ ನೈಜ ಸ್ಥಿತಿ ಪರಿಸ್ಥಿತಿ ತಿಳಿದುಕೊಳ್ಳಬಹುದು.