ಮಲೆನಾಡು ಸೆರಗು ಹೊದ್ದುಕೊಂಡಿರುವ ಧಾರವಾಡದಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ಗಾಳಿಯೂ ಜೋರಾಗಿ ಬೀಸುತಿದೆ.
ಗಾಳಿಯ ರಭಸಕ್ಕೆ ಹತ್ತಾರು ಮರಗಳು ಧರೆಗೆ ಊರುಳಿವೆ. ಧಾರವಾಡದ AC ಕಚೇರಿ ಎದುರು ಮರದ ಟೋಂಗೆಯೊಂದು ನೆಲಕ್ಕೆ ಬೀಳಲು ಕೇವಲ ಹತ್ತು ಅಡಿ ಮಾತ್ರ ಬಾಕಿ ಉಳಿದಿದೆ.
ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಕ್ಕೂ ಹೆಚ್ಚು ವಾಹನಗಳ ಓಡಾಟವಿದ್ದು, ಟೋಂಗೆ ಅಪಾಯ ತಂದೂಡ್ಡಿದೆ. AC ಕಚೇರಿಗೆ ಹೋಗುವವರು ಟೋಂಗೆ ನೋಡಿಕೊಂಡು ಸುರಕ್ಷಿತವಾಗಿ ಹೋಗಬಹುದಾಗಿದೆ. ಪಾಲಿಕೆಯವರು ಬ್ಯುಸಿ ಇದ್ದು ಪ್ರಾಣ ಅಲ್ಲಿ ಓಡಾಡುವವರ ಕೈಯಲ್ಲಿದೆ.