ಧಾರವಾಡ ಜಿಲ್ಲಾ ಪಂಚಾಯತಿಯ ಅತಿಥಿ ಗ್ರಹದ ಕುರಿತು ಕರ್ನಾಟಕ ಫೈಲ್ಸ್ ನಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ, ಅತಿಥಿ ಗ್ರಹದ ಸ್ವಚ್ಛತಾ ಕಾರ್ಯ ಆರಂಭಗೊಂಡಿದೆ.
ಡೆಂಗ್ಯೂ ಕುರಿತು ಜಿಲ್ಲೆಯಾಧ್ಯಂತ ಅಭಿಯಾನ ನಡೆಸಿದ್ದ ಜಿಲ್ಲಾ ಪಂಚಾಯತ ಅಧಿಕಾರಿಗಳು ತಮ್ಮದೇ ಅತಿಥಿ ಗ್ರಹವನ್ನು ಸ್ವಚ್ಚವಾಗಿಟ್ಟುಕೊಳ್ಳದೆ ನಗೆಪಾಟಿಲಿಗೆ ಒಳಗಾಗಿದ್ದರು. ಡೆಂಗ್ಯೂ ಹಾಟ್ ಸ್ಪಾಟ್ ಆಗಿದ್ದ ಜಿಲ್ಲಾ ಪಂಚಾಯತಿಯ ಅತಿಥಿ ಗ್ರಹದ ಆವರಣ ಸ್ವಚ್ಚತೆಯತ್ತ ಮುಖ ಮಾಡಿದೆ. ಇದು ಕರ್ನಾಟಕ ಫೈಲ್ಸ್ ನ ಮತ್ತೊಂದು ಫಲಶೃತಿ ವರದಿಯಾಗಿದೆ.