ಕರ್ನಾಟಕದ ಆಡಳಿತ ಭಾಷೆ ಕನ್ನಡವಾಗಿದೆ. ಕರ್ನಾಟಕದ ಪ್ರತಿಯೊಂದು ಇಲಾಖೆಯಲ್ಲಿಯೂ ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹರಿಸಬೇಕಾಗುತ್ತದೆ. ಕೆಳಹಂತದ ನ್ಯಾಯಾಲಯದಿಂದ ಜಿಲ್ಲಾ ನ್ಯಾಯಾಲಯಗಳಲ್ಲಿ ಮತ್ತು ಉಚ್ಚ ನ್ಯಾಯಾಲಯಗಳಲ್ಲಿಯೂ ಸಹ ಜನ ಸಾಮಾನ್ಯರಿಗೆ ತಿಳಿಯುವಂತೆ ಕನ್ನಡದಲ್ಲಿಯೇ ವಿಚಾರಣೆಗೆ ಆದ್ಯತೆ ಇರುತ್ತದೆ.
ಪ್ರಾಚೀನ ಕಾಲದಿಂದಲೂ ನ್ಯಾಯ, ನೀತಿ ಹಾಗೂ ಧರ್ಮಗಳು ಭಾರತೀಯ ಜನ-ಜೀವನದ ಸಾಮಾಜಿಕ, ಆರ್ಥಿಕ, ಧಾರ್ಮಿಕ ರಂಗಗಳ ಅವಿಭಾಜ್ಯಗಳಾಗಿದ್ದು, ನ್ಯಾಯಾಲಯದಲ್ಲಿ ನ್ಯಾಯದಾನ ಪ್ರಕ್ರಿಯೆಯಿಂದ ಮಾತ್ರ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ ಎಂದು ಕಾನೂನು ನ್ಯಾಯ ಮಾನವ ಹಕ್ಕುಗಳು ಸಂಸದಿಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಡಾ. ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.
ಅವರು ಬೆಂಗಳೂರಿನ ಪ್ರತಿಷ್ಠಿತ ಕಾನೂನು ಪುಸ್ತಕಗಳ ಪ್ರಕಾಶಕರಾದ ಕರ್ನಾಟಕ ಲಾ ರಿಪೋರ್ಟರ್ ಪಬ್ಲಿಕೇಷನ್, ಬಿಬಿಸಿ ರವರಿಂದ ಯುವ ನ್ಯಾಯವಾದಿ ಎಸ್.ಕೆ. ನದಾಫ ಅವರ ಸಂಪಾದಿತ ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಕನ್ನಡ ಕಾನೂನು ಪುಸ್ತಕಗಳನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.
ಯುವ ನ್ಯಾಯವಾದಿ ನದಾಫ ಅವರು ಮೂರು ಕಾನೂನು ಪುಸ್ತಕಗಳನ್ನು ಒಳಗೊಂಡ ಕ್ರಿಮಿನಲ್ ಮ್ಯಾನುವಲ್ ಮತ್ತು ಮೂರು ಪುಸ್ತಕಗಳು ಪ್ರತ್ಯೇಕವಾಗಿ ಕನ್ನಡದಲ್ಲಿ ಸಂಪಾದಿಸಿದ್ದು ಸಂಪಾದಿತ ಕಾನೂನು ಪುಸ್ತಕಗಳು ಲೋಕಾರ್ಪಣೆ ಮಾಡುವ ಅವಕಾಶ ಸಿಕ್ಕಿದ್ದು ಬಹಳಷ್ಟು ಸಂತಸ ತಂದಿದೆ. ಇಂದಿನ ಸಂಘರ್ಷದ ಕಂದಕಗಳನ್ನು ಮುಚ್ಚಿ, ಯಶಸ್ಸಿನ ಹಾದಿಯಲ್ಲಿ ಸಾಗಲು ಕಾನೂನು ವಿದ್ಯಾರ್ಥಿಗಳಿಗೆ, ನ್ಯಾಯವಾದಿಗಳಿಗೆ, ನ್ಯಾಯಾಧೀಶರುಗಳಿಗೆ, ಉಪನ್ಯಾಸಕರುಗಳಿಗೆ ಈ ಕನ್ನಡ ಕಾನೂನು ಪುಸ್ತಕಗಳು ಉತ್ತಮ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.
ಬಹುತೇಕ ಕಾನೂನು ಪುಸ್ತಕಗಳು ಇಂಗ್ಲಿಷ್ ಭಾಷೆಯಲ್ಲಿಯೇ ಇರುತ್ತವೆ. ಇದರಿಂದ ಜನ ಸಾಮಾನ್ನರಿಗೆ ಕಾನೂನು ಬಗ್ಗೆ ತಿಳಿದುಕೊಳ್ಳುವುದು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಕನ್ನಡ ಭಾಷೆಯಲ್ಲಿಯೇ ಕನ್ನಡ ಪುಸ್ತಕಗಳು ಮುದ್ರಣವಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಯಾವತ್ತು ನಿಮ್ಮೊಂದಿಗೆ ಇರುತ್ತದೆ ಅಂತಾ ಪ್ರತಿಷ್ಠಿತ ಕಾನೂನು ಪುಸ್ತಕಗಳ ಪ್ರಕಾಶಕರಾದ ಕರ್ನಾಟಕ ಲಾ ರಿಪೋರ್ಟರ್ ಪಬ್ಲಿಕೇಷನ್, ಬಿಬಿಸಿಯ ಮುಖ್ಯಸ್ಥರಾದ ತ್ಯಾಗರಾಜ ಮತ್ತು ನ್ಯಾಯವಾದಿ ಎಸ್.ಕೆ ನದಾಫ ರವರಿಗೆ ಹಾರೈಸಿದರು.
ನ್ಯಾಯವಾದಿ ಎಸ್ ಕೆ ನದಾಫ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಕಾನೂನು ವಿಧ್ಯಾರ್ಥಿಗಳಿಗೆ, ನ್ಯಾಯಾಧೀಶರುಗಳಿಗೆ, ನ್ಯಾಯವಾದಿಗಳಿಗೆ, ಉಪನ್ಯಾಸಕರುಗಳಿಗೆ ಮತ್ತು ಜನಸಾಮಾನ್ಯರಿಗೆ ಕನ್ನಡದಲ್ಲಿ ಕಾನೂನು ಪುಸ್ತಕಗಳ ಅವಶ್ಯಕತೆ ಹೆಚ್ಚಿದೆ. ಈ ಪುಸ್ತಕ ಸಂಪಾದಿಸಿದ್ದೇನೆ. ಮುಖ್ಯವಾಗಿ ನನ್ನ ಮಾರ್ಗದರ್ಶಕರು ಹಾಗೂ ನಮ್ಮ ಮಾತೃ ಇಲಾಖೆಯ ಸಚಿವರಿಂದಲೇ ಈ ಪುಸ್ತಕ ಬಿಡುಗಡೆಯಾಗಿದ್ದು ನನ್ನ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ.ಎಸ್ ಸಂಗ್ರೇಶಿ, ಕಾನೂನು ಸಚಿವರ ಆಪ್ತ ಕಾರ್ಯದರ್ಶಿಯಾದ ಡಾ. ಶಿವಪುತ್ರ ಬಾಬುರಾವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಟಿ.ಎಮ್. ಭಾಸ್ಕರ, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆಯ ಸಂಶೋಧನಾ ನಿರ್ದೇಶಕರಾದ ಸಿ.ಎಸ್ ಪಾಟೀಲ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಲತಿಫ್ ಎಸ್, ಕುನ್ನಿಭಾವಿ, ಸಂಸ್ಥೆಯ ರಿಸರ್ಚ-ಹೆಡ್ ಡಾ. ರೇವಯ್ಯ ಒಡೆಯರ ಇವರುಗಳು ನ್ಯಾಯವಾದಿ ಎಸ್.ಕೆ ನದಾಫ್ ಮತ್ತು ಪ್ರಕಾಶಕರಾದ ತ್ಯಾಗರಾಜ ಅವರಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ ಸಿ.ಟಿ ಗುರುಪ್ರಸಾದ, ಸಹಾಯಕ ಕುಲಸಚಿವರಾದ ಶಹಜಹಾನ ಮುದುಕವಿ, ಬೆಂಗಳೂರಿನ ಕರ್ನಾಟಕ ಲಾ ರಿಪೋರ್ಟ್, ಬಿಬಿಸಿ ಪ್ರಕಾಶನದ ಪ್ರಕಾಶಕ ವಿ, ತ್ಯಾಗರಾಜ್ ಹಾಗೂ ನ್ಯಾಯವಾದಿ ಕುಶವಂತ ಕುಮಾರ್, ಲೇಖಕ ಎಸ್.ಕೆ. ನದಾಫ್, ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
