ಇತ್ತೀಚಿನ NFHS-5, ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಮಾಂಸಾಹಾರ ಸೇವನೆ ಮಾಡುವವರು ಹೆಚ್ಚಾಗಿದ್ದಾರೆ ಎಂಬುದು ಸಮೀಕ್ಷೆಯಿಂದ ದೃಢಪಟ್ಟಿದೆ.
NFHS -5 ನಡೆಸಿದ ಸಮೀಕ್ಷೆಗೆ ಒಳಗಾದ ಮಹಿಳೆಯರಲ್ಲಿ ಶೇಕಡಾ 77.6 ಮತ್ತು ಸಮೀಕ್ಷೆ ಮಾಡಿದ ಪುರುಷರಲ್ಲಿ ಶೇಕಡಾ 85.4 ರಷ್ಟು ಜನ ಮೀನು, ಕೋಳಿ ಅಥವಾ ಅಂತದ್ದೆ ಮಾಂಸ ತಿನ್ನುವುದನ್ನು ದೃಢಪಡಿಸಿದ್ದಾರೆ.
ಕರ್ನಾಟಕ ಸರ್ಕಾರದ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಸೇರಿದಂತೆ ವಿವಿಧ ಮೂಲಗಳ ಪ್ರಕಾರ, ಕರ್ನಾಟಕದಲ್ಲಿ ಪ್ರತಿ ದಿನ 20 ಸಾವಿರ ಕೆಜಿ ಮೇಕೆ ಮಾಂಸ ಮಾರಾಟವಾಗುತ್ತದೆ.
ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರಿನಂತಹ ನಗರಗಳಲ್ಲಿ ಮೇಕೆ ಮಾಂಸಕ್ಕೆ ಹೆಚ್ಚು ಬೇಡಿಕೆ ಇದೆ.
ಕರ್ನಾಟಕಕ್ಕೆ ಪ್ರತಿ ದಿನ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರದಿಂದ ಮೇಕೆ ಮಾಂಸ ಬರುತ್ತದೆ
ಆಂಧ್ರಪ್ರದೇಶದ ಕರ್ನೂಲ್, ಕಡಪ ಮತ್ತು ಚಿತ್ತೂರು, ತೆಲಂಗಾಣದ ಹೈದರಾಬಾದ್, ರಂಗಾ ರೆಡ್ಡಿ ಮತ್ತು ಮಹೆಬೂಬ್‌ನಗರ, ತಮಿಳುನಾಡಿನ ಚೆನ್ನೈ, ತಿರುವಳ್ಳೂರು ಮತ್ತು ಕಾಂಚೀಪುರಂ ಜಿಲ್ಲೆಗಳಿಂದ ಮಾಂಸ ದಿನನಿತ್ಯ ಕರ್ನಾಟಕಕ್ಕೆ ಬರುತ್ತದೆ.
ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ವಿಶೇಷವಾಗಿ ಸೊಲ್ಲಾಪುರ, ಒಸ್ಮಾನಾಬಾದ್ ಮತ್ತು ಲಾತೂರ್ ಜಿಲ್ಲೆಗಳಿಂದಲೂ ಬರುವ ಮೇಕೆ ಮಾಂಸ ಕರ್ನಾಟಕದಲ್ಲಿ ಮಾರಾಟವಾಗುತ್ತದೆ