ಕಳೆದೆರಡು ವರ್ಷಗಳಿಂದ ನನ್ನ ಮೇಲೆ ಹಲ್ಲೆ ಮಾಡಲು ಕಾಣದ ಕೈಗಳು ಪ್ರಯತ್ನ ನಡೆಸಿದ್ದಾರೆ ಎಂದು ಧಾರವಾಡ ಅಂಜುಮನ್ ಅಧ್ಯಕ್ಷ ಹಾಗೂ ಕಾಂಗ್ರೇಸ್ ಮುಖಂಡ ಇಸ್ಮಾಯಿಲ್ ತಮಟಗಾರ ಹೇಳಿದ್ದಾರೆ.
ಧಾರವಾಡದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಇಸ್ಮಾಯಿಲ್, ನನ್ನದೇ ಸಮುದಾಯದ ಹುಡುಗರನ್ನು ಬಳಸಿಕೊಂಡು ಅವರಿಗೆ ಪ್ರಚೋದನೆ ನೀಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ನಿನ್ನೇ ನಡೆದ ಘಟನೆಯಲ್ಲಿ 18 ರಿಂದ 20 ವರ್ಷ ವಯಸ್ಸಿನ ಹುಡುಗರು ನಶೆ ಏರಿಸಿಕೊಳ್ಳುವ ಎಂ ಡಿ ಅನ್ನೋ ಮಾದಕ ದೃವ್ಯ ಸೇವಿಸುತ್ತಾರೆ ಅನ್ನೋ ಮಾಹಿತಿ ಗೊತ್ತಾಗಿದೆ. ಪೊಲೀಸರು ನಿಷ್ಪಕ್ಷ ತನಿಖೆ ನಡೆಸುತ್ತಾರೆ ಅನ್ನೋ ಭರವಸೆ ಇದ್ದು, ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ನನಗೆ ಪ್ರಾಣ ಭಯ ಇರುವ ಬಗ್ಗೆ ಎರಡು ವರ್ಷಗಳ ಹಿಂದೆಯೇ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದೆ ಎಂದ ಅವರು ರಕ್ಷಣೆ ಕೊಡಬೇಕಾದ ಹೊಣೆ ಪೊಲೀಸ್ ಇಲಾಖೆ ಮೇಲಿದೆ ಎಂದರು.
ನಾಳೆ ಮತ್ತೆ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ನಡೆದಿರುವ ಹುನ್ನಾರದ ಬಗ್ಗೆ ದೂರು ಕೂಡುವದಾಗಿ ಇಸ್ಮಾಯಿಲ್ ತಮಟಗಾರ ಹೇಳಿದ್ದಾರೆ. ನೂತನ ಪೊಲೀಸ ಆಯುಕ್ತರು ಉತ್ತಮ ಕೆಲಸ ಮಾಡುತ್ತಿದ್ದು, ಕ್ರೈಮ್ ಚಟುವಟಿಕೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಅವರ ಪ್ರಯತ್ನ ಶ್ಲಾಘನೀಯ ಎಂದರು.
ನನ್ನನ್ನು ಭೇಟಿ ಮಾಡಿದ ಸ್ನೇಹಿತರು ಹುಷಾರ ಆಗಿ ಇರುವಂತೆ ಹೇಳಿದ್ದಾರೆ. ಈ ವಿಷಯವನ್ನು ನಾನು ಮನೆಯ ಸದಸ್ಯರಿಗೂ ಹೇಳಿದ್ದೇನೆ ಎಂದರು.