ಮೈಸೂರು ಮಾಜಿ ಸಂಸದ ಪ್ರತಾಪ ಸಿಂಹ ಇಂದು ಗೌರಿ ಲಂಕೇಶ ಕೊಲೆ ಆರೋಪಿ ಮದ್ದೂರ ನವೀನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ನವೀನ ಮನೆಗೆ ಭೇಟಿ ನೀಡಿದ ಪ್ರತಾಪ ಸಿಂಹ, ಕುಶಲೋಪರಿ ವಿಚಾರಿಸಿದರು. ಗೌರಿ ಲಂಕೇಶ್ ಕೊಲೆ ಆರೋಪಿ ಮದ್ದೂರು ನವೀನಗೆ ಇತ್ತೀಚಿಗೆ ಜಾಮೀನು ಸಿಕ್ಕಿದೆ.
ಈ ಮೊದಲು ಗೌರಿ ಲಂಕೇಶ್ ಕೊಲೆ ಕೇಸನಲ್ಲಿ ಎ 1 ಆರೋಪಿಯಾಗಿದ್ದ ನವೀನ ಇದೀಗ ಎ 17 ಆರೋಪಿಯಾಗಿದ್ದಾನೆ. ನವೀನಗೆ ಆರುವರೆ ವರ್ಷದ ಬಳಿಕ ಜಾಮೀನು ಸಿಕ್ಕಿದೆ.