ರೈತ ಬಂಡಾಯದ ನಾಡು ನವಲಗುಂದದಲ್ಲಿ, ರೈತರ ಹೊಲಕ್ಕೆ ರಸ್ತೆ ಹೆಸರಲ್ಲಿ ಕೋಟಿ ಕೋಟಿ ಲೂಟಿ ಮಾಡಲಾಗಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆರೋಪಿಸಿದ್ದಾರೆ.
ನವಲಗುಂದ ತಾಲೂಕಿನಲ್ಲಿ ಯಾವದೇ ಟೆಂಡರ ಕರೆಯದೆ ಕಾಮಗಾರಿ ನಡೆಸಿ, ಹೊಲದ ರಸ್ತೆ ನಿರ್ಮಾಣದ ಹೆಸರಲ್ಲಿ ಕೋಟ್ಯಾಂತರ ಹಣ ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಶಂಕರ ಪಾಟೀಲ ಆರೋಪ ಮಾಡಿದ್ದಾರೆ.
ಅನಧಿಕೃತ, ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಅವರು, ನವಲಗುಂದದ ಗುಡ್ಡದ ಮಣ್ಣನ್ನು ಕಾನೂನು ಬಾಹಿರವಾಗಿ ಅಗೆಯುತ್ತಿರುವದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು.
ನಂತರ ನಮ್ಮ ಹೊಲ ನಮ್ಮ ರಸ್ತೆ ಹೆಸರಿನಲ್ಲಿ ಕೆಲಸ ನಡೆದ ಸ್ಥಳಕ್ಕೆ ಭೇಟಿ ನೀಡಿ, ಡಾಂಬರ ರಸ್ತೆ ಮೇಲೆ ಮಣ್ಣು ಹಾಕಿ ಹೊಲದ ರಸ್ತೆ ಮಾಡುತ್ತಿರುವದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ನವಲಗುಂದ ತಾಲ್ಲೂಕಿನಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದ ಅವ್ಯವಹಾರಗಳ ಧಾಖಲೆ ಬಿಡುಗಡೆ ಮಾಡುವದಾಗಿ ಹೇಳಿದ ಶಂಕರ ಪಾಟೀಲ, ಇದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದರು