ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಕಾಮಗಾರಿ ಕುರಿತು ಮಾಜಿ ಸಚಿವ ಶಂಕರ ಪಾಟೀಲ ಆಕ್ಷೇಪ ಎತ್ತಿದ್ದೆ ತಡ, ಶಾಸಕ ಎನ್ ಎಚ್ ಕೋನರೆಡ್ಡಿ ಪರ ಬೆಂಬಲಿಗರು ಮೈಕೊಡವಿಕೊಂಡು ಎದ್ದು ನಿಂತಿದ್ದಾರೆ.
ವಾಟ್ಸಾಪ್ ಗ್ರೂಪ್ಪ್ ಗಳಲ್ಲಿ ಕೆಲವರು ನಡೆದಿರುವ ಕಾಮಗಾರಿ ಕಾನೂನು ಬಾಹಿರ, ಅಲ್ಲದೆ ಗುಡ್ಡದ ಮಣ್ಣು ಕದ್ದು ಮಾಡಿದ ರಸ್ತೆ ಎಂದು ಆರೋಪಿಸಿದರೆ, ಕೆಲವರು ಹೊಲದ ರಸ್ತೆಗೆ ಗುಡ್ಡದ ಮಣ್ಣು ಹಾಕಲಾಗಿದೆ ಎಂದು ಬ್ಯಾಟ್ ಬಿಸುತ್ತಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ನವಲಗುಂದಕ್ಕೆ ಭೇಟಿ ನೀಡಿ, ನವಲಗುಂದ ಗುಡ್ಡದ ಮಣ್ಣನ್ನು, ಗಣಿ ಇಲಾಖೆಯ ಅನುಮತಿ ಇಲ್ಲದೆ ಅಗೆಯಲಾಗುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದೆ ಹೋದರೆ, FIR ಧಾಖಲು ಮಾಡುವದಾಗಿ ಎಚ್ಚರಿಸಿದ್ದರು.
ಇದೀಗ ಗುಡ್ಡದ ಮಣ್ಣು ಮತ್ತು ಹೊಲದ ರಸ್ತೆ ವಿಷಯ ಮುನ್ನೇಲೆಗೆ ಬಂದಿದ್ದು, ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಒನ್ ಟು ಒನ್ ಚರ್ಚೆ ನಡೆದಿದೆ. NH v/s Others ನಡುವೆ ರೋಚಕ ಹಣಾಹಣಿ ನಡೆದಿದೆ.
ಅಂತಿಮವಾಗಿ ಕಳ್ಳರು ಯಾರು ಅನ್ನೋದು ಗೊತ್ತಾಗುವ ತನಕ ಈ ಚಾಟಿಂಗ್ ಯುದ್ಧ ನಿಲ್ಲೋ ಲಕ್ಷಣ ಕಾಣುತ್ತಿಲ್ಲ. ನವಲಗುಂದ ರಾಜಕೀಯ ಇದೀಗ ರಂಗು ಪಡೆದಿದೆ.
