ಕಿರೇಸೂರ ಬಳಿ ಭೀಕರ ಅಪಘಾತ ನಡೆದಿದ್ದು, ನಶೆಯಲ್ಲಿ ಟ್ರಕ್ ಓಡಿಸುತ್ತಿದ್ದ ಚಾಲಕ 15 ಕುರಿಗಳ ಸಾವಿಗೆ ಕಾರಣನಾಗಿದ್ದಾನೆ.
ಬಾಗಲಕೋಟ ಜಿಲ್ಲೆಯ ಕುರುಗಾಹಿಗಳು, ಕುರಿಗಳನ್ನು ರಸ್ತೆ ದಾಟಿಸುವಷ್ಟರಲ್ಲಿ ಟ್ರಕ್ ಚಾಲಕ ಕುರಿಗಳ ಮೇಲೆ ವಾಹನ ಚಲಾಯಿಸಿದ್ದಾನೆ.
ಘಟನೆ ನಡೆಯುತ್ತಿದ್ದಂತೆ ಚಾಲಕ ಪರಾರಿಯಾಗಿದ್ದು, ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
