ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ, ಟೆಂಡರ್ ನಲ್ಲಿ ಮೀಸಲಾತಿ ಕೊಡುವ ಉದ್ದೇಶದಿಂದ ಜಾರಿ ಬಂದಿರುವ ಯೋಜನೆಗೆ ಕನ್ನ ಹಾಕಲಾಗಿದೆ.
ಧಾರವಾಡದ ಮರಾಠಾ ಕಾಲೋನಿಯಲ್ಲಿ ವಾಸವಾಗಿದ್ದ ರಾಮದುರ್ಗ ಮೂಲದ ಬಾಳಕೃಷ್ಣ ಚೋಳಚಗುಡ್ಡ ಎಂಬಾತ ಜಾತಿಯಿಂದ ಪ್ರವರ್ಗ 2ಬಿ ಗೆ ಸೇರಿದ್ದರು, SC ಜಾತಿ ಪ್ರಮಾಣ ಪತ್ರ ಪಡೆದಿದ್ದಾನೆ.
ಅಷ್ಟೇ ಅಲ್ಲ, ಆತ ಟೆಂಡರ್ ಸಮಯದಲ್ಲಿ ಸಲ್ಲಿಸಿದ ಜಾತಿ ಪ್ರಮಾಣ ಪತ್ರದ RD ಸಂಖ್ಯೆಯನ್ನು ನಕಲು ಮಾಡಿದ್ದು, ಈಗ ಬಹಿರಂಗಗೊಂಡಿದೆ. ಮುಸ್ಲಿಮ್ ಸಮುದಾಯಕ್ಕೆ ಸೇರಿದ ಹುಬ್ಬಳ್ಳಿಯ ಓರ್ವ ಮಹಿಳೆಯ RD ನಂಬರನ್ನು ಬಳಸಿಕೊಂಡು, ನಕಲಿ SC ಜಾತಿ ಪ್ರಮಾಣ ಪತ್ರ ಪಡೆದಿರುವದು ಬೆಳಕಿಗೆ ಬಂದಿದೆ.
ಕರ್ನಾಟಕ ಫೈಲ್ಸ್ ಗೆ ಧಾಖಲೆಗಳು ಲಭ್ಯವಾಗಿದೆ. ಜಾತಿ ಪ್ರಮಾಣ ಪತ್ರ ನೀಡುವಾಗ ಆ ಪ್ರಮಾಣಪತ್ರದ ಮೇಲೆ ನಂಬರನ್ನು ಹಾಕಲಾಗುತ್ತದೆ.
RD0038579504722 ಈ ಸಂಖ್ಯೆ ಅಸಲಿಗೆ ಹುಬ್ಬಳ್ಳಿಯ ಪ್ರವರ್ಗ 2ಬಿ ಗೆ ಸೇರಿದ ಮುಸ್ಲಿಮ್ ಮಹಿಳೆಯ ಜಾತಿ ಪ್ರಮಾಣ ಪತ್ರದ ಗುರುತಿನ ಸಂಖ್ಯೆಯಾಗಿದೆ.
ಮುಸ್ಲಿಮ್ ಮಹಿಳೆಯ ಜಾತಿ ಪ್ರಮಾಣ ಪತ್ರದ ಸಂಖ್ಯೆ RD0038579504722 ನ್ನು ಬಳಸಿಕೊಂಡ ಬಾಳಕೃಷ್ಣ SC ಜಾತಿಗೆ ಸೇರಿದವನೆಂದು ನಕಲು ಪ್ರತಿ ಮಾಡಿಸಿಕೊಂಡಿರುವದು ಬೆಳಕಿಗೆ ಬಂದಿದೆ.
ನಕಲಿ ಜಾತಿ ಪ್ರಮಾಣ ಪತ್ರ ಕೊಡುವ ಒಂದು ಗುಂಪು ಧಾರವಾಡ ಜಿಲ್ಲೆಯಲ್ಲಿ ಸಕ್ರಿಯವಾಗಿದೆ ಎನ್ನಲಾಗಿದ್ದು, ಧಾರವಾಡ ತಹಸೀಲ್ದಾರ್ ಕಚೇರಿಯ ಕೆಲ ಸಿಬ್ಬಂದಿಗಳು ಇದರಲ್ಲಿ ಕೈಜೋಡಿಸಿದ್ದಾರೆ ಎನ್ನಲಾಗಿದೆ. ಎಲ್ಲಿಯೂ ಸಹ ಮೇಲ್ನೋಟಕ್ಕೆ ನಕಲು ಅನ್ನೋದು ಗೊತ್ತಾಗದ ಹಾಗೆ ನಕಲಿ ಜಾತಿ ಪ್ರಮಾಣ ಪತ್ರ ಕೊಡಲಾಗುತ್ತಿದೆ.
