ಮಾರುಕಟ್ಟೆಯಲ್ಲಿ ಕಲಬೆರಕೆ ಆಹಾರಗಳು ಕಾಲಿಟ್ಟಿದ್ದು, ಗ್ರಾಹಕರ ವಂಚನೆ ಎಗ್ಗಿಲ್ಲದೇ ನಡೆದಿದೆ.
ಗೋದಿ ಹಿಟ್ಟಿನಲ್ಲಿ ಕಲ್ಲಿನ ಪುಡಿ ಸೇರಿಸಿ ದೇಶದ ವಿವಿದೆಡೆ ಮಾರಾಟ ಮಾಡುತ್ತಿದ್ದ ಜಾಲವನ್ನು ಉತ್ತರ ಪ್ರದೇಶ ಪೊಲೀಸರು ಭೇಧಿಸಿದ್ದಾರೆ.
ಉತ್ತರ ಪ್ರದೇಶದ ಹತ್ತಕ್ಕೂ ಹೆಚ್ಚು ನಕಲಿ ಹಿಟ್ಟಿನ ಗಿರಣಿ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು 400 ಕೆಜಿ ಕಲ್ಲಿನ ಪುಡಿ ವಶಪಡಿಸಿಕೊಂಡಿದ್ದಾರೆ. ಗೋದಿ ಹಿಟ್ಟು ಖರೀದಿಸುವ ಮುನ್ನ ಗ್ರಾಹಕರು ಎಚ್ಚರ ವಹಿಸಬೇಕಿದೆ.
ಕಲ್ಲಿನ ಪುಡಿ ಮಿಶ್ರಿತ ನಕಲಿ ಹಿಟ್ಟನ್ನು ದೇಶದ ವಿವಿಧ ಭಾಗಗಳಲ್ಲಿ ಮಾರಾಟಕ್ಕೆ ಕಳಿಸಲಾಗುತ್ತಿತ್ತು ಎನ್ನಲಾಗಿದೆ.