ಇಬ್ಬರು ಸಿಟಿ ಬಸ್ ಕಂಡಕ್ಟರಗಳು ಸಾರ್ವಜನಿಕರ ಎದುರೇ ಪರಸ್ಪರ ಹೊಡೆದಾಡಿಕೊಂಡ ಘಟನೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ನಡೆದಿದೆ.
ತಲಪಾಡಿ – ಮಂಗಳೂರು ನಡುವೆ ಸಂಚರಿಸುವ ಪದ್ಮ ಟ್ರಾವೆಲ್ಸ್ ಬಸ್ ಮತ್ತು ಹೊಸಂಗಡಿ ಜಂಕ್ಷನ್ ನಿಂದ ಮಂಗಳೂರು ನಡುವೆ ಸಂಚರಿಸುವ ಅಸರ್ ಟ್ರಾವೆಲ್ಸ್ ಬಸ್ ನಿರ್ವಾಹಕರ ನಡುವೆ ಜಗಳ ನಡೆದಿದೆ.
ಹೊಡೆದಾಟದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಸ್ ನಿರ್ವಾಹಕರಾದ ಅಜಯ್ ಮತ್ತು ವಿಷ್ಣು ಎಂಬವರು ಪರಸ್ಪರ ಹೊಡೆದಾಡಿಕೊಂಡಿದ್ದು,ಇಬ್ಬರನ್ನು ಬಂಧಿಸಲಾಗಿದೆ.
ತಲಪಾಡಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಬಸ್ಸನ್ನು ಬೆನ್ನಟ್ಟಿದ ಇನ್ನೊಂದು ಬಸ್ಸು ಚಾಲಕ ಓವರ್ ಬ್ರಿಡ್ಜ್ ಬಸ್ಸು ನಿಲ್ದಾಣದಲ್ಲಿ ಅಡ್ಡಲಾಗಿ ನಿಲ್ಲಿಸಿದ್ದೆ ಈ ಘಟನೆಗೆ ಕಾರಣ ಎನ್ನಲಾಗಿದೆ.
