ಹುಬ್ಬಳ್ಳಿಯ ಐತಿಹಾಸಿಕ ಇದಗಾ ( ರಾಣಿ ಚೆನ್ನಮ್ಮ) ಮೈದಾನದಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿರುವ ಗಣೇಶ ಹಬ್ಬದ ಅಂಗವಾಗಿ ಇಂದು ಹಾಲಗಂಬ ಪೂಜೆಯನ್ನು ನೆರವೇರಿಸಲಾಯಿತು.
ಪಾಲಿಕೆ ಕಳೆದ ವರ್ಷದಂತೆ ಈ ವರ್ಷವು ಮೈದಾನದಲ್ಲಿ ಗಣೇಶ ಪ್ರತಿಷ್ಟಾಪನೆಗೆ ಅನುಮತಿ ನೀಡಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಳೆದ ವಾರ ಹಿರಿಯ IPS ಅಧಿಕಾರಿ ಎಡಿಜಿಪಿ ಜಿತೇಂದ್ರ ಹಾಗೂ ಅಲೋಕ ಕುಮಾರ ಹುಬ್ಬಳ್ಳಿಗೆ ಭೇಟಿ ನೀಡಿ ಕೆಲವು ಸೂಚನೆ ನೀಡಿದ್ದಾರೆ.
ಬಿಗಿ ಭದ್ರತೆ ನಡುವೆ ನಾಳೆ ಇದಗಾ ಮೈದಾನದಲ್ಲಿ ಗಣೇಶ ಪ್ರತಿಷ್ಟಾಪನೆ ನಡೆಯಲಿದ್ದು, ಇಂದು ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಹಾಲು ಗಂಬ ಪೂಜೆ ನಡೆಯಿತು.
