ಧಾರವಾಡದ ಕರ್ನಾಟಕ ವಿಶ್ವ ವಿಧ್ಯಾಲಯದ ಕ್ಯಾಂಪಸ್ ನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಕವಿವಿ ಗ್ರಂಥಾಲಯ ಬಳಿಯ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಚಿರತೆಯ ಓಡಾಟ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗ್ರಂಥಾಲಯದಿಂದ ಪತ್ರಿಕೋದ್ಯಮ ವಿಭಾಗಕ್ಕೆ ಹೋಗುವ ರಸ್ತೆಯಲ್ಲಿ ಚಿರತೆ ದಾಟಿದ್ದು, ಅಲ್ಲಿಯೇ ಸುತ್ತಾಡುತ್ತಿರುವ ಶಂಕೆ ವ್ಯಕ್ತವಾಗಿದೆ.
ಕ್ಯಾಂಪಸ್ ನಲ್ಲಿನ ಸಿಸಿ ಕ್ಯಾಮರಾದಲ್ಲಿ ಚಿರತೆ ದೃಶ್ಯ ಸೆರೆಯಾಗಿದ್ದು, ಆತಂಕ ಸೃಷ್ಟಿಸಿದೆ. ಕವಿವಿ ಕ್ಯಾಂಪಸ್ ಸುತ್ತ ಬಡಾವಣೆಗಳಿದ್ದು, ಜನ ಭಯಭೀತರಾಗಿದ್ದಾರೆ.