ನವಲಗುಂದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ. ಒಟ್ಟು 23 ಸದಸ್ಯ ಬಲದ ನವಲಗುಂದ ಪುರಸಭೆಯಲ್ಲಿ ಕಾಂಗ್ರೇಸ್ ( ಜೆಡಿಎಸ್ ಸೇರಿದಂತೆ ) 16 ಸದಸ್ಯರನ್ನು ಹೊಂದಿದೆ.
6 ಜನ ಬಿಜೆಪಿ ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ ಶಿಗ್ಲಿ, ಶಿವಾನಂದ ತಡಸಿ, ಜೀವನ ಪವಾರ, ಫರಿದಾ ಬಬರ್ಚಿ ರೇಸ್ ನಲ್ಲಿದ್ದು, ಕುರುಬ ಸಮುದಾಯದ ಶಿವಾನಂದ ತಡಸಿಗೆ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಸಾಮಾಜಿಕ ನ್ಯಾಯ ಪರಿಪಾಲನೆ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಈಗಾಗಲೇ ಒಕ್ಕಲಿಗ ಸಮಾಜದಿಂದ ಅಪ್ಪಣ್ಣ ಹಳ್ಳದ, ಮರಾಠಾ ಸಮಾಜದಿಂದ ಮಂಜು ಜಾಧವ, ಮುಸ್ಲಿಮ್ ಸಮಾಜದಿಂದ ಮೋದಿನ ಶಿರೂರ ಅಧ್ಯಕ್ಷರಾಗಿದ್ದು, ಈ ಸಲ ಕುರುಬ ಸಮಾಜಕ್ಕೆ ಪ್ರಾತಿನಿದ್ಯ ನೀಡಲು ಶಾಸಕ ಎನ್ ಎಚ್ ಕೋನರೆಡ್ಡಿ ಹಾಗೂ ವಿನೋದ ಅಸೂಟಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಹುಸೇನಬಿ ಧಾರವಾಡ ಹಾಗೂ ಫರಿದಾಬೇಗಂ ಬಬರ್ಚಿ ಇಬ್ಬರ ನಡುವೆ ಪೈಪೋಟಿ ಇದ್ದು, ಉಪಾಧ್ಯಕ್ಷರಾಗಿ ಹುಸೇನಬಿ ಆಯ್ಕೆಯಾಗುವ ಸಾಧ್ಯತೆ ಇದೆ.