ಸರ್ಕಾರ ರೈತರಿಗೆ ಖುಷಿ ಸುದ್ದಿ ನೀಡಿದೆ. ರೈತರು ಕೃಷಿ ಜಮೀನಿಗೆ ದಾರಿಯಿಲ್ಲದೆ ಸಾಕಷ್ಟು ಕಷ್ಟ ಪಡುತ್ತಿರುವದನ್ನು ಗಮನಿಸಿರುವ ಸರ್ಕಾರ, ಜಮೀನಿಗೆ ಹೋಗಲು ದಾರಿ ಇಲ್ಲದೆ ಇದ್ದ ಪಕ್ಷದಲ್ಲಿ, ದಾರಿ ಮಾಡಿ ಕೊಡಲು ಸರ್ಕಾರ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.
ರೈತರು, ಸರ್ಕಾರದ ನಕ್ಷೆ ಪ್ರಕಾರ ಕೃಷಿ ಜಮೀನಿಗೆ ರಸ್ತೆ ಇದೆಯೋ, ಇಲ್ಲವೋ ಎಂಬುದನ್ನು ಈಗ ಚೆಕ್ ಮಾಡಬಹುದಾಗಿದೆ.
ಹೊಲಗಳ ಅಕ್ಕಪಕ್ಕ ಇರುವ ಹಳ್ಳಗಳು, ಅರಣ್ಯ ಪ್ರದೇಶ, ಗೋಮಾಳ ಎಲ್ಲೆಲ್ಲಿ ಬರುತ್ತವೆ ಎಂದು ಚೆಕ್ ಮಾಡಬಹುದು.
ಹೊಲದ ದಾರಿಯನ್ನು ಕಂಡು ಹಿಡಿಯಲು ಈ ಕೆಳಗೆ ಕೊಟ್ಟಿರುವ ವೆಬ್ಸೈಟ್ ಅಡ್ರೆಸ್ ಗೆ ಭೇಟಿ ನೀಡಿ.
https://landrecords.karnataka.gov.in/service3/ ಇಲ್ಲಿ
ಭೇಟಿ ನೀಡಿ ಮಾಹಿತಿ ಪಡೆಯಬಹುದು.