ನೋಟಿನಲ್ಲಿ ಮಹಾತ್ಮ ಗಾಂಧಿ ಬದಲಿಗೆ ಅನುಪಮ್ ಖೇರ್ ಅವರ ಫೋಟೋ ಹಾಕಿ ವಂಚಿಸಿದ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.
ಬುಲಿಯನ್ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ವಂಚನೆಯ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಕೆಲ ಪುಂಡರು 1 ಕೋಟಿ 90 ಲಕ್ಷ ಮೌಲ್ಯದ 2100 ಗ್ರಾಂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ.
ಈ ದರೋಡೆಕೋರರು ಆಭರಣ ವ್ಯಾಪಾರಿಗಳಿಗೆ ನೀಡಿದ ಹಣ ನಕಲಿಯಾಗಿದ್ದು, ಅದರಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ಅವರ ಫೋಟೋವನ್ನು ಮುದ್ರಿಸಲಾಗಿದೆ. ಈ ನೋಟು ನೋಡಿದ ಆಭರಣ ವ್ಯಾಪಾರಿಗಳು ಬೆಚ್ಚಿಬಿದ್ದಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆರೋಪಿಗಳನ್ನು ಬಂಧಿಸಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.