ಹುಬ್ಬಳ್ಳಿ ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಎ ಎಂ ಹಿಂಡಸಗೇರಿ ಅವರ ನೇತೃತ್ವದಲ್ಲಿ ಅಂಜುಮನ್ ಸಂಸ್ಥೆ ಪರವಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನೇಮಕಗೊಂಡ ಹಿರಿಯ ಪತ್ರಕರ್ತ ಜೆ ಅಬ್ಬಾಸ ಮುಲ್ಲಾ ಅವರನ್ನು ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಮುಖಂಡ ಅಲ್ತಾಫ್ ಹಳ್ಳೂರ, ಸಂಸ್ಥೆಯ ಪದಾಧಿಕಾರಿಗಳಾದ ದಾದಾ ಖೈರಾತಿ, ಬಶೀರ ಹಳ್ಳೂರ, ಇಲಿಯಾಸ್ ಮನಿಯಾರ, ಬಶೀರ ಗುಡಮಾಲ್ ನಾವೀದ ಮುಲ್ಲಾ, ಸಮದ ಜಮಖಾನೆ, ಅಬ್ದುಲ್ ಗನಿ ವಲಿ ಅಹ್ಮದ್ ಸೇರಿದಂತೆ ನಗರದ ವಿವಿಧ ಜಮಾತಿನ ಮುತವಲ್ಲಿಗಳು, ಮತ್ತಿತರರು ಉಪಸ್ಥಿತರಿದ್ದರು.
ಮತ್ತೊಂದೆಡೆ ಪದ್ಮಶ್ರೀ ಪುರಸ್ಕೃತ ಪತ್ರಿಕೋಧ್ಯಮಿ, ಡಾ, ವಿಜಯ ಸಂಕೇಶ್ವರ ಅವರು, ಅಬ್ಬಾಸ ಮುಲ್ಲಾ ಅವರಿಗೆ ಅಭಿನಂದಿಸಿ, ಅಗತ್ಯ ಮಾರ್ಗದರ್ಶನ ಮಾಡಿದರು.
ಹುಬ್ಬಳ್ಳಿ ಸೆಂಟ್ರಲ್ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿಯವರು ಅಬ್ಬಾಸ ಮುಲ್ಲಾ ಇವರಿಗೆ ಸನ್ಮಾನಿಸಿ ಅಭಿನಂದಿಸಿದರು. ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ಸಹ ಶುಭ ಕೋರಿದರು.