ಸಂಸದರಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿಯವರಿಂದ ತೆರವಾದ ಶಿಗ್ಗಾವ ವಿಧಾನ ಸಭಾ ಕ್ಷೇತ್ರಕ್ಕೆ ಸಧ್ಯದಲ್ಲಿಯೇ ಉಪಚುನಾವಣೆ ನಡೆಯಲಿದ್ದು, ಕಾಂಗ್ರೇಸ್ ಪಕ್ಷದಲ್ಲಿ ಬಿರುಸಿನ ಪೈಪೋಟಿ ನಡೆದಿದೆ.
ಯಾಸೀರಖಾನ ಪಠಾಣ, ಅಜ್ಜಂ ಪೀರ್ ಖಾದ್ರಿ ಜೊತೆ ಸಿ ಎಂ ಇಬ್ರಾಹಿಂ ಸುಪುತ್ರ ಸಿ ಎಂ ಫೈಜ್ ಇದೀಗ ಟಿಕೇಟಗಾಗಿ ಪೈಪೋಟಿ ನಡೆಸಿದ್ದಾರೆ.
ಸಿ ಎಂ ಇಬ್ರಾಹಿಂ ಮಗ, ಸಿ ಎಂ ಫೈಜ್, ಸವಣೂರನಲ್ಲಿ ಮನೆ ಮಾಡಿಕೊಂಡಿದ್ದು, ಕ್ಷೇತ್ರ ಸಂಚಾರ ನಡೆಸಿದ್ದಾರೆ. ಶಿಗ್ಗಾವ ಆಖಾಡಾ ಸದ್ದು ಮಾಡುತ್ತಿದ್ದು, ಚುನಾವಣೆ ಘೋಷಣೆಗೂ ಮುನ್ನ ಬಿರುಸಿನ ಚಟುವಟಿಕೆ ನಡೆದಿದೆ.
ಸಿ ಎಂ ಫೈಜ್ ಅವರು ಮುಸ್ಲಿಮ್ ಪ್ರಾಭಲ್ಯವುಳ್ಳ ಶಿಗ್ಗಾವ್ ಸವಣೂರ ಕ್ಷೇತ್ರದಲ್ಲಿ ಜನರನ್ನು ಭೇಟಿ ಮಾಡುತ್ತಿದ್ದು, ಚರ್ಚೆಯಲ್ಲಿದ್ದಾರೆ.
ಯಾಸಿರಖಾನ ಪಠಾಣ, ಅಜ್ಜಂ ಪೀರ್ ಖಾದ್ರಿ ಈಗಾಗಲೇ ತಮ್ಮ ತಮ್ಮ ಬೆಂಬಲಿಗರ ದಂಡು ಕಟ್ಟಿಕೊಂಡು ಫೀಲ್ಡಗಿಳಿದಿದ್ದಾರೆ.