ರೈತರ ಪರ ಅಂತೇಳಿ, ರೈತ ಹೋರಾಟಗಾರನ ಮೇಲೆ ಅವಾಚ್ಯ ಪದ ಬಳಕೆ ಮಾಡಿರುವ ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿ ಕೂಡಲೇ ಕ್ಷಮೆ ಕೇಳಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಅಣ್ಣಿಗೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ನಾಯಕ ಷಣ್ಮುಖ ಗುರಿಕಾರ, ಶಾಸಕ ಎನ್ ಎಚ್ ಕೋನರೆಡ್ಡಿಯವರ ಮೇಲೆ ಹರಿಹಾಯ್ದರು. ಕೋನರೆಡ್ಡಿಯವರು ಮೊನ್ನೆ ತಮ್ಮ ನಿಜ ಸ್ವರೂಪ ತೋರಿಸಿದ್ದು, ರೈತರ ಬಗ್ಗೆ ಹಗುರವಾಗಿ ಮಾತನಾಡಿರುವದನ್ನು ಖಂಡಿಸಿದರು.
ಅಣ್ಣಿಗೇರಿ ಉಗ್ರಾಣದಲ್ಲಿ ರೈತರ ದಾನ್ಯಗಳು ಕಳುವು ಆದ ಸಂದರ್ಭದಲ್ಲಿ, ರೈತ ಹೋರಾಟಗಾರರಿಗೆ ಅವಾಚ್ಯ ಪದ ಬಳಕೆ ಮಾಡಿದ್ದು, ಅನಾಗರಿಕವಾಗಿ ವರ್ತಿಸಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ನಡೆಸಿದ ಜಂಟಿ ಸುದ್ದಿಗೋಷ್ಟಿಯಲ್ಲಿ ಎಸ್ ಬಿ ದಾನಪ್ಪಗೌಡ, ಶಿವಾನಂದ ಹೊಸಳ್ಳಿ, ಶಿವಶಂಕರ ಕಲ್ಲೂರ, ಶಿವಯೋಗಿ ಸುರಕೋಡ, ವಿ ಪಿ ಗುರಿಕಾರ, ಮಲ್ಲಿಕಾರ್ಜುನ ಸಂಗನಗೌಡ ಅಣ್ಣಿಗೇರಿ ಬ್ಲಾಕ್ ಜೆಡಿಎಸ್ ಅಧ್ಯಕ್ಷ ವಿರೇಶ ಶಾನಭೋಗರ ಉಪಸ್ಥಿತರಿದ್ದರು.