ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿಯವರ ಜನಪರ ಕೆಲಸ ಸಹಿಸದೆ ಕೆಲವರು ಇಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೇಸ್ ನಾಯಕರು ಆರೋಪಿಸಿದ್ರು.
ಅಣ್ಣಿಗೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಂಜುನಾಥ ಮಾಯಣ್ಣವರ, ಶಾಸಕ ಎನ್ ಎಚ್ ಕೋನರೆಡ್ಡಿಯವರಿಗೆ ಕೆಲ ಹಿತಾಸಕ್ತಿಗಳು ರೈತ ವಿರೋಧಿ ಪಟ್ಟ ಕಟ್ಟುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಚಕ್ಕಡಿ ರಸ್ತೆಗಳನ್ನು ಮಾಡಿ ರೈತ ಕುಲಕ್ಕೆ ನೆನಪಿಡುವ ಕೆಲಸ ಮಾಡಿರುವ ಕೋನರೆಡ್ಡಿಯವರು, ಸಿಟ್ಟಿನ ಭರದಲ್ಲಿ ಹೇಳಿದ್ದನ್ನೇ ದೊಡ್ಡದನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರ ನಡೆದಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ತಾಲೂಕಾ ಅಧ್ಯಕ್ಷ ವರ್ಧಮಾನ ಹಿರೇಗೌಡರ, ಕಾಡಾ ಅಧ್ಯಕ್ಷ ಸದುಗೌಡ ಪಾಟೀಲ, ಸೇವಾ ದಳದ ಅಧ್ಯಕ್ಷ ಚಂಬಣ್ಣ ಹಾಳದೋಟರ, ಶಿವಾನಂದ ಭೂಮಣ್ಣವರ, ಮೆಹಬೂಬಿ ನವಲಗುಂದ, ಬಾಬಾಜಾನ ಮುಲ್ಲಾ, ಇಮಾಮ ದಾರವಾನ, ದಾವಲಸಾಬ ಸುಂಕದ, ಪ್ರವೀಣ ಬಸಾಪುರ, ರೈಮಾನಸಾಬ ಹೊರಗಿನಮನಿ, ತಿಪ್ಪಣ್ಣ ಕೊರವರ, ಜಯಲಕ್ಷ್ಮಿ ಜಕರೆಡ್ಡಿ ಉಪಸ್ಥಿತರಿದ್ದರು.