ಮಹಾರಾಷ್ಟ್ರದ ಎನ್ ಸಿ ಪಿ ನಾಯಕ ಬಾಬಾ ಸಿದ್ದಿಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಲಾರೆನ್ಸ್ ಬಿಷ್ಣೋಯಯನ್ನು ವಿಚಾರಣೆಗೆ ಪಡೆಯಲು ಹೋದ ಮುಂಬೈ ಪೊಲೀಸರಿಗೆ ಹಿನ್ನೆಡೆಯಾಗಿದೆ ಎಂದು ಹೇಳಲಾಗಿದೆ.
ಲಾರೆನ್ಸ್ ಬಿಷ್ಣೋಯ್ ಅವರನ್ನು ಗುಜರಾತ್ ಪೊಲೀಸರಿಂದ ಮುಂಬೈ ಪೊಲೀಸರಿಗೆ ಕಸ್ಟಡಿಗೆ ವರ್ಗಾಯಿಸುವುದನ್ನು ಗೃಹ ಸಚಿವಾಲಯದ ಆದೇಶ ನಿರ್ಬಂಧಿಸಿದೆ ಎಂದು ರಾಷ್ಟ್ರೀಯ ಸುದ್ದಿ ವಾಹಿನಿ NDTV ಸುದ್ದಿ ಮಾಡಿದೆ.
ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಗುಜರಾತ್‌ನ ಸಬರಮತಿ ಜೈಲಿನಲ್ಲಿ ಬಂಧಿಯಾಗಿದ್ದಾನೆ. ಮುಂಬೈ ಪೊಲೀಸರು ಸಾಬರಮತಿ ಜೈಲಿನಿಂದ ಬಿಷ್ಣೋಯ್ ಅವರ ಕಸ್ಟಡಿಗೆ ಹಲವು ಮನವಿಗಳನ್ನು ಸಲ್ಲಿಸಿದ್ದಾರೆ. NDTV ವರದಿಯ ಪ್ರಕಾರ ಅವರ ವರ್ಗಾವಣೆಯನ್ನು ತಡೆಯುವ ಗೃಹ ಸಚಿವಾಲಯದ ಆದೇಶದಿಂದಾಗಿ ಗುಜರಾತ್ ಜೈಲು ಅಧಿಕಾರಿಗಳು ಮಹಾರಾಷ್ಟ್ರ ಪೊಲೀಸರ ವಿನಂತಿಗಳನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಲಾರೆನ್ಸ್ ಬಿಷ್ಣೋಯ್ ಅವರನ್ನು ಎಲ್ಲಿ ಬಂಧಿಸಲಾಗಿದೆಯೋ ಅಲ್ಲಿ ಮಾತ್ರ ವಿಚಾರಣೆ ನಡೆಸಬಹುದು ಎಂದು ಹೇಳಿ, ಮಹಾರಾಷ್ಟ್ರ ಪೊಲೀಸರ ಮನವಿಯನ್ನು ತಳ್ಳಿಹಾಕಿದ್ದಾರೆ ಎನ್ನಲಾಗಿದೆ.
