ಶಿಗ್ಗಾವಿ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆ ರಂಗೇರಿದೆ. ಟಿಕೇಟ್ ವಿಷಯವಾಗಿ ಕಾಂಗ್ರೇಸ್ ಪಾಳಯದಲ್ಲಿ ಮುಸುಕಿನ ಗುದ್ದಾಟ ಮುಂದುವರೆದಿದೆ.
ಶಿಗ್ಗಾವಿ ಕ್ಷೇತ್ರದ ಕಾಂಗ್ರೇಸ್ ಟಿಕೇಟ್ ಘೋಷಣೆ ಮಾಡುವಲ್ಲಿ ವಿಳಂಬ ಮಾಡುತ್ತಿರುವ ಹೈಕಮಾಂಡ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಶಿಗ್ಗಾವಿ ಕ್ಷೇತ್ರಕ್ಕೆ ಕಾಂಗ್ರೇಸ್ ಟಿಕೇಟ್ ಅಲ್ಪಸಂಖ್ಯಾತ ಮುಸ್ಲಿಮರಿಗೆ ಕೊಡಬೇಕೋ ಅಥವಾ ಲಿಂಗಾಯತ ಸಮಾಜಕ್ಕೆ ಕೊಡಬೇಕು ಎಂಬುದರ ಬಗ್ಗೆ ಇನ್ನು ಚರ್ಚೆ ಮಾಡಲಾಗುತ್ತಿದೆ.
ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಯಾಸಿರ್ ಖಾನ್ ಪಠಾಣ ನಮಗೆ ಟಿಕೇಟ್ ನೀಡುವಂತೆ ಒತ್ತಡ ಹೇರುತ್ತಿದ್ದರೆ, ಮತ್ತೊಂದೆಡೆ ಶಾಸಕ ವಿನಯ ಕುಲಕರ್ಣಿ, ತಮ್ಮ ಧರ್ಮಪತ್ನಿ ಶಿವಲೀಲಾ ಅಥವಾ ಮಗಳು ವೈಶಾಲಿಗೆ ಟಿಕೇಟ್ ನೀಡುವಂತೆ ಹೈಕಮಾಂಡ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ಈ ಸಲವು ಮುಸ್ಲಿಮ್ ನಾಯಕರ ಪೈಕಿ ಒಬ್ಬರಿಗೆ ಕಾಂಗ್ರೇಸ್ ಟಿಕೇಟ್ ನೀಡಬೇಕು ಎಂಬ ಆಗ್ರಹ, ಸಮುದಾಯದಿಂದ ಕೇಳಿ ಬಂದಿದೆ. ಟಿಕೇಟ್ ವಿಳಂಬ ಮಾಡುತ್ತಿರುವದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಒಂದು ವೇಳೆ ಹೈಕಮಾಂಡನಿಂದ ವ್ಯತಿರಿಕ್ತ ನಿರ್ಣಯ ಬಂದಲ್ಲಿ ಸಂಜೆ ಮುಸ್ಲಿಮ್ ಮುಖಂಡರು ಮಹತ್ವದ ಸಭೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ. ಮುಸ್ಲಿಮ್ ಮತಗಳನ್ನು ಪಡೆದು ಆಯ್ಕೆಯಾಗಿರುವ ಲಿಂಗಾಯತ ಶಾಸಕರು, ಮುಸ್ಲಿಮ್ ನಾಯಕತ್ವ ಬೆಳೆಸಲು ಬಿಡುತ್ತಿಲ್ಲ ಎಂಬ ಆರೋಪ ಸಣ್ಣಗೆ ಶುರುವಾಗಿದೆ.
