ಶಿಗ್ಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿಗೆ ಇದೀಗ ಪಂಚಮಸಾಲಿ ನಾಯಕರು ಸೆಡ್ಡು ಹೊಡೆದಿದ್ದಾರೆ. ಮಾತು ತಪ್ಪಿದ ಆರೋಪ ಇದೀಗ ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಬಸವರಾಜ ಬೊಮ್ಮಾಯಿಯವರ ಮೇಲೆ ಕೇಳಿ ಬಂದಿದೆ.
ಸಂಸದ ಸ್ಥಾನಕ್ಕೆ ಆಯ್ಕೆಯಾದ ಬಳಿಕ ದುಂಡಿಗೌಡರು ಅಭ್ಯರ್ಥಿ ಯಾಗಲಿ ಎಂದು ಬಸವರಾಜ ಬೊಮ್ಮಾಯಿಯವರು ಹೇಳಿದ್ದರು. ಇದೀಗ ತಮ್ಮ ಮಗನಿಗೆ ಟಿಕೇಟ ಕೊಡಿಸಿದ್ದಾರೆ ಎಂದು ದುಂಡಿಗೌಡರ ಬೆಂಬಲಿಗರು ಆರೋಪಿಸಿದ್ದಾರೆ.
ನಿನ್ನೇ ಮತ್ತು ಇವತ್ತು ಸಭೆ ನಡೆಸಿದ ಪಂಚಮಸಾಲಿ ನಾಯಕ ದುಂಡಿಗೌಡರ ಬೆಂಬಲಿಗರು ಬೊಮ್ಮಾಯಿಯವರ ವಿರುದ್ಧ ಸಿಡಿದೆದ್ದಿದ್ದಾರೆ. ಕುಟುಂಬ ರಾಜಕಾರಣ ಮಾಡುವದಾದರೆ ನಮ್ಮನ್ನೇಕೆ ಬಳಸಿಕೊಂಡಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು ಚುನಾವಣೆಯಲ್ಲಿ ಬೊಮ್ಮಾಯಿಯವರಿಗೆ ತಕ್ಕ ಉತ್ತರ ನೀಡುವದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ.
ಶಿಗ್ಗಾವ ಕ್ಷೇತ್ರದಲ್ಲಿ ಸುಮಾರು 50 ಸಾವಿರದಷ್ಟಿರುವ ಪಂಚಮಸಾಲಿ ಸಮುದಾಯ ಈ ಬಾರಿ ಬಿಜೆಪಿಗೆ ಬಿಜೆಪಿಗೆ ಬಿಸಿ ಮುಟ್ಟಿಸಲಿದೆ ಎನ್ನಲಾಗಿದೆ.
ಶಿಗ್ಗಾವ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಕಾಂಗ್ರೇಸ್ ಅಭ್ಯರ್ಥಿಗೆ ಅನುಕೂಲವಾಗಲಿದೆ ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.
