ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿಯವರು ಸಾಮಾಜಿಕ ಜಾಲತಾಣ “ಎಕ್ಸ್” ನಲ್ಲಿ ಒಂದು ವಿಡಿಯೋ ತುಣುಕನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಕಾರಿನಲ್ಲಿ ಹೋಗುವಾಗ ದಾರಿ ಮಧ್ಯೆ ಸಿಕ್ಕ ಶಾಲಾ ಬಾಲಕರನ್ನು ಮಾತನಾಡಿಸಿದ ವಿಡಿಯೋಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
https://x.com/BSBommai/status/1851249836718190646
ಶಾಲಾ ಮಕ್ಕಳ ಶಾಲೆಯಲ್ಲಿ ಮೂರು ಕಿಲೋಮೀಟರ್ ನಡೆದುಕೊಂಡು ಹೋಗುತ್ತಿರುವ ವಿಷಯ ಬಾಲಕರು ಹೇಳಿದಾಗ ಬೊಮ್ಮಾಯಿಯವರು ಚೆನ್ನಾಗಿ ಕಲಿಯಿರಿ ಎಂದು ಹೇಳಿ, ನಾನು ಸಹ ಮೂರು ಕಿಲೋಮೀಟರುಗಳು ನಡೆದುಕೊಂಡು ಶಾಲೆಗೆ ಹೋಗುತ್ತಿದ್ದೆ ಎಂದು ಹೇಳುವ ವಿಡಿಯೋಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸವರಾಜ ಬೊಮ್ಮಾಯಿಯವರು ಸೌಜನ್ಯಕ್ಕೂ ಕಾರಿನಿಂದ ಇಳಿದು ಮಾತನಾಡಿ, ಮಕ್ಕಳು ನಡೆದುಕೊಂಡು ಹೋಗುತ್ತಿದ್ದರು, ಅವರನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕೆ ಕಿಡಿ ಕಾರಿದ್ದಾರೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾತನಾಡಿ, ಅವರಿಗೆ ಕನಿಷ್ಠ ಪಕ್ಷ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
