ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಗೊತ್ತಾಗುತ್ತಿದೆ. ಬಗೆದಷ್ಟು ಹಗರಣಗಳು ಹೊರ ಬರುತ್ತಿವೆ.
ಹುಡಾ ಅಧ್ಯಕ್ಷರಾಗಿ ಕಳೆದ 7 ತಿಂಗಳ ಹಿಂದೆ ಅಧಿಕಾರ ಸ್ವಿಕರಿಸಿರುವ ಶಾಕೀರ ಸನದಿಯವರು ಬರುವದಕ್ಕೂ ಮುನ್ನ ಒಂದಿಷ್ಟು ಗೋಲ್ಮಾಲ್ ನಡೆದಿವೆ.
ಪ್ಲಾಟ್ ನಂಬರ 49 ಮತ್ತು 50 ಈಗ ದೊಡ್ಡ ಸುದ್ದಿ ಮಾಡಿದೆ. ಧಾರವಾಡದ ಹೃದಯ ಭಾಗದಲ್ಲಿರುವ ಬೆಲೆ ಬಾಳುವ ಈ ನಿವೇಶನವನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿರುವದು ಬೆಳಕಿಗೆ ಬಂದಿದೆ.
ಹುಡಾ ಆಯುಕ್ತ ಸಂತೋಷ ಬಿರಾದಾರ ಅವರು ದಕ್ಷ ಆಡಳಿತಗಾರ ಎಂದು ಹೆಸರು ಪಡೆದಿದ್ದರು, ಅವರ ಅವಧಿಯಲ್ಲಿಯೇ ಈ ಬೆಳವಣಿಗೆ ನಡೆದಿರುವದು ಸಂಶಯ ಮೂಡಿಸಿದೆ.
ಈ ತಿಂಗಳು ನಡೆಯಲಿರುವ ಪ್ರಾಧಿಕಾರದ ಸಭೆಯಲ್ಲಿ ಈ ವಿಷಯ ಕೋಲಾಹಲ ಎಬ್ಬಿಸಲಿದ್ದು, ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬ ಪರಿಸ್ಥಿತಿ ಬರಲಿದೆ.
ಪ್ಲಾಟ್ ನಂಬರ 49 ಮತ್ತು 50 ಮಾರಾಟದ ಹಿಂದೆ ದೊಡ್ಡ ಮಟ್ಟದ ಕಿಕ್ ಬ್ಯಾಕ್ ಪಡೆದಿದ್ದಾರಂತೆ ಅನ್ನೋ ಸುದ್ದಿ ಪ್ರಾಧಿಕಾರ ಅಂಗಳದಲ್ಲಿ ದೂಳೆಬ್ಬಿಸಿದೆ.
