ತೀವ್ರ ಕುತೂಹಲ ಮೂಡಿಸಿದ್ದ ಮಹಾರಾಷ್ಟ್ರ ಹಾಗೂ ಜಾರ್ಖಂಡ ವಿಧಾನ ಸಭೆಗೆ ನಡೆದ ಮತದಾನ ಮುಕ್ತಾಯವಾಗಿದೆ.
ಮಹಾರಾಷ್ಟ್ರದ 288 ಕ್ಷೇತ್ರಗಳಿಗೆ ನಡೆದ ಮತದಾನ ನಡೆದಿದ್ದು, ಎನ್ ಡಿ ಎ ನಿಚ್ಚಳ ಬಹುಮತ ಪಡೆಯಲಿದೆ ಎಂದು ಚಾಣುಕ್ಯ ಸಮೀಕ್ಷೆ ತಿಳಿಸಿದೆ.
ಎನ್ ಡಿ ಎ 152 ರಿಂದ 160 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ಹೇಳಲಾಗಿದ್ದು, ಇಂಡಿಯಾ ಒಕ್ಕೂಟ 130 ರಿಂದ 138 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿದೆ. ಸಿ ಎನ್ ಎನ್ ಸಮೀಕ್ಷೆಯಲ್ಲಿಯೂ ಮಹಾರಾಷ್ಟ್ರದಲ್ಲಿ ಮತ್ತೆ ಎನ್ ಡಿ ಎ ಸರ್ಕಾರ ರಚಿಸಲಿದೆ ಎಂದು ಹೇಳಿದೆ.
ಮೇಘಾ ಲೋಕ ಪೋಲ್ ಸಮೀಕ್ಷೆ ಪ್ರಕಾರ ಮಹಾರಾಷ್ಟ್ರದಲ್ಲಿ ಇಂಡಿಯಾ ಒಕ್ಕೂಟ ಸರ್ಕಾರ ರಚಿಸಲಿದೆ ಎಂದು ಹೇಳಿದ್ದು, ಇಂಡಿಯಾ ಒಕ್ಕೂಟ 151-162 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿದೆ. ಮೇಘಾ ಲೋಕ ಪೋಲ್ ಸಮೀಕ್ಷೆ ಪ್ರಕಾರ ಎನ್ ಡಿ ಎ 115-128 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿದೆ.
ಜಾರ್ಖಂಡದಲ್ಲಿ ಒಟ್ಟು 81 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಎನ್ ಡಿ ಎ ಒಕ್ಕೂಟ 44-53 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿದ್ದು, ಇಂಡಿಯಾ ಒಕ್ಕೂಟ 25-37 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿದೆ.
