ದೇಶದ ಶ್ರೀಮಂತ ಉಧ್ಯಮಿ ಗೌತಮ ಅದಾನಿ ಮೇಲೆ ಅಮೇರಿಕಾದ ಫೆಡರಲ್ ಕೋರ್ಟ ಲಂಚ ನೀಡಿದ ಆರೋಪ ಹೊರಿಸಿ, ಬಂದನ ವಾರೆಂಟ್ ಜಾರಿ ಮಾಡಿದೆ.
ಸೌರಶಕ್ತಿ ಯೋಜನೆಯನ್ನು ಪಡೆಯಲು, ಗೌತಮ ಅದಾನಿ, ಭಾರತ ಸರ್ಕಾರದ ಅಧಿಕಾರಿಗಳಿಗೆ ಎರಡು ಸಾವಿರದಾ 29 ಕೋಟಿ ಲಂಚ ನೀಡಿದ್ದಾರೆ ಎಂದು ಅಮೇರಿಕಾದ ಫೆಡರಲ್ ಕೋರ್ಟ ಆರೋಪಿಸಿದೆ.
ಅಮೇರಿಕಾದ ಉಧ್ಯಮಿಗಳಿಗೆ ಸತ್ಯವನ್ನು ಮುಚ್ಚಿಡುವ ಮತ್ತು ಮೋಸ ಮಾಡುವ ಮೂಲಕ ಅಮೇರಿಕಾದ ಕಾನೂನನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ನ್ಯಾಯಾಲಯ ಆರೋಪಿಸಿದೆ.
ಗೌತಮ ಅದಾನಿ ಸೋದರ ಅಳಿಯ ಸಾಗರ ಅದಾನಿ, ಅದಾನಿ ಸೌರಶಕ್ತಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ವಿನಿತ ಜೈನ್ ಮೇಲೆಯೂ ಆರೋಪ ಹೊರಿಸಲಾಗಿದೆ.
ಅದಾನಿ ಅವ್ಯವಹಾರದ ಬಗ್ಗೆ ಕಾಂಗ್ರೇಸ್ ಮೊದಲಿನಿಂದಲೂ ದ್ವನಿ ಎತ್ತುತ್ತಿದ್ದು, ಭಾರತ ಸರ್ಕಾರ ಗೌತಮ ಅದಾನಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
