ತುಮಕೂರು ಜಿಲ್ಲೆಯಲ್ಲಿ ನಡೆದ ದಲಿತ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ 3 ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ 21 ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟ ಮಾಡಿದೆ.
ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ 2019ರಲ್ಲಿ ಹೊನ್ನಮ್ಮ ಎಂಬ ದಲಿತ ಮಹಿಳೆಯ ಕೊಲೆ ನಡೆದಿತ್ತು.
ಡಾಬಾ ನಡೆಸುತ್ತಿದ್ದ ಹೊನ್ನಮ್ಮ ತಾನು ತೆಗೆದಿಟ್ಟಿದ್ದ ಕಟ್ಟಿಗೆ ಕಳುವು ಮಾಡಲಾಗಿದೆ ಎಂದು ದೂರು ನೀಡಿದ್ದಳು. ಇದೇ ಕಾರಣಕ್ಕೆ ಊರಿನ ಕೆಲವರ ಜೊತೆ ಹೊನ್ನಮ್ಮಳ ನಡುವೆ ಜಗಳ ನಡೆದಿತ್ತು. ಜಗಳ ಹೊನ್ನಮನ ಕೊಲೆ ಮಾಡುವ ಮೂಲಕ ಅಂತ್ಯ ಕಂಡಿತ್ತು. ಇದು ರಾಜ್ಯದಲ್ಲಿ ದೊಡ್ಡ ಸುದ್ದಿ ಮಾಡಿತ್ತು.
ಹಂದನಕೆರೆ ಪೊಲೀಸರು ಪ್ರಕರಣ ಧಾಖಲಿಸಿಕೊಂಡು 21 ಜನರನ್ನು ಬಂಧಿಸಿದ್ದರು. ಎಲ್ಲಾ ಸಾಕ್ಷಾಧಾರಗಳ ವಿಚಾರಣೆ ನಡೆಸಿದ ನ್ಯಾಯಾಲಯ ಎಲ್ಲರೂ ದೋಷಿಗಳೆಂದು ಹೇಳಿ, ಇಂದು ಜೀವಾವಧಿ ಶಿಕ್ಷೆ ನೀಡಿದೆ.