ಮೋಜು ಮಸ್ತಿಗೆಂದು ಹೊನ್ನಾವರದ ಇಕೋ ಬೀಚ್ ಗೆ ಬಂದು, ಸಮುದ್ರ ಪಾಲಾಗುತ್ತಿದ್ದ, ಹುಬ್ಬಳ್ಳಿ ಮೂಲದ ಮೂವರು ಯುವತಿಯರನ್ನು ಲೈಫ್ ಗಾರ್ಡ್ ಸಿಬ್ಬಂದಿ ಬಚಾವ್ ಮಾಡಿದ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ಐವರು ಸ್ನೇಹಿತರೊಡನೆ, ಹುಬ್ಬಳ್ಳಿಯ ಸ್ವಾತಿ, ಚೇತಾಲಿ, ಸೃಷ್ಟಿ, ಸಮುದ್ರದಲ್ಲಿ ಇಳಿದಿದ್ದರು. ಈ ಸಂದರ್ಭದಲ್ಲಿ ದಡಕ್ಕೆ ಬಂದು ಸೇರಲು ಕಷ್ಟಪಡುತ್ತಿದ್ದರು ಎನ್ನಲಾಗಿದೆ.
ಅಲ್ಲಿಯೇ ಇದ್ದ ಲೈಫ್ ಗಾರ್ಡ್ ಸಿಬ್ಬಂದಿ, ಮೂವರು ಯುವತಿಯರನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ.
ಶಶಾಂಕ ಅಂಬಿಗ, ಮಹೇಶ್ ಹರಿಕಂತ್ರ, ಯೋಗೇಶ್ ಎಂಬ ಮೂವರು ಲೈಫ್ ಗಾರ್ಡ್ ಸಿಬ್ಬಂದಿ, ಮೂವರು ಯುವತಿಯರ ಪ್ರಾಣ ಉಳಿಸಿದ್ದಾರೆ.