ಗಣಿ ನಾಡು ಸಂಡೂರು ಉಪ ಚುನಾವಣೆ ಈಗಷ್ಟೆ ಮುಗಿದಿದೆ. ಫಲಿತಾಂಶ ಹೊರಗೆ ಬಿದ್ದಾಗಿದೆ. ಆದರೆ ಕಾಂಗ್ರೇಸ್ಸಿನ ಸಂಡೂರು ಸಾಮ್ರಾಜ್ಯ ಕ್ರಮೇಣ ಕುಸಿಯುತ್ತಿದೆ.
ಕಾರ್ಮಿಕ ಸಚಿವ ಸಂತೋಷ ಲಾಡರ ತವರು ಸಂಡೂರು ಗೆಲ್ಲೋದು ಲಾಡ್ ಅವರಿಗೆ ಪ್ರತಿಷ್ಟೆಯಾಗಿತ್ತು. ಹೀಗಾಗಿ ಸಂತೋಷ ಲಾಡ್ ಅವರು 15 ಕ್ಕೂ ಹೆಚ್ಚು ದಿನಗಳ ಕಾಲ ಅಲ್ಲಿಯೇ ಠಿಕಾಣಿ ಹೂಡಿ, ಕಾಂಗ್ರೇಸ್ ಅಭ್ಯರ್ಥಿಗೆ ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಡೂರಿನಲ್ಲಿ ಕುಸಿಯುತ್ತಿದೆ ಕಾಂಗ್ರೇಸ್ ಸಾಮ್ರಾಜ್ಯ
ಮತ ಹೆಚ್ಚಿಸಿಕೊಂಡ ಬಿಜೆಪಿ
ಈ ಸಲದ ಸಂಡೂರು ಉಪ ಚುನಾವಣೆ ದೊಡ್ಡ ಸದ್ದು ಮಾಡಿತ್ತು. ಬಳ್ಳಾರಿ ಪ್ರವೇಶದ ಬಳಿಕ ಮೊದಲ ಉಪ ಚುನಾವಣೆಗೆ ಧುಮುಕಿದ್ದ ಜನಾರ್ಧನ ರೆಡ್ಡಿ, ಬಂಗಾರು ಹನುಮಂತರಿಗೆ ಟಿಕೇಟ್ ಕೊಡಿಸಿ ಸೆಡ್ಡು ಹೊಡೆದಿದ್ದರು. ಚುನಾವಣಾ ಕಾವು ಕ್ರಮೇಣ ರಂಗೇರತೊಡಗಿತ್ತು.
ಸಂತೋಷ ಲಾಡ್ ಹಾಗೂ ಜನಾರ್ಧನ ರೆಡ್ಡಿ ನಡುವೆ ನಾನಾ? ನೀನಾ? ಎನ್ನುವ ರೀತಿಯಲ್ಲಿ ವಾಕ್ ಟಾಕ್ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಮೂರು ದಿನಗಳ ಕಾಲ ಸಂಡೂರಿನಲ್ಲಿ ವಾಸ್ತವ್ಯ ಮಾಡಿ, 18 ಕಡೆಗೆ ಪ್ರಚಾರ ಸಭೆ ನಡೆಸಿದ್ರು.
ಯಾವಾಗ ಮುಖ್ಯಮಂತ್ರಿಗಳು ಎಂಟ್ರಿ ಕೊಟ್ರೋ, ಜನಾರ್ಧನ ರೆಡ್ಡಿ ಮತ್ತೆ ಅಬ್ಬರಿಸ ತೊಡಗಿದ್ರು. ಮಾತಿ ಮಾತಿನಲ್ಲಿ, ಜನಾರ್ಧನ ರೆಡ್ಡಿಗೆ ತಿರುಗೇಟು ಕೊಡುತ್ತ ಹೊರಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ” ಯಾರರಿ ಅವರು ಜನಾರ್ಧನ ರೆಡ್ಡಿ “ ಎಂದು ಅಬ್ಬರಿಸಿದ್ದೆ ತಡ, ಅಹಿಂದ ಮತಗಳು ಸಿದ್ದರಾಮಯ್ಯನವರ ತೆಕ್ಕೆಗೆ ಬರುವಲ್ಲಿ ಯಶಸ್ವಿಯಾಯ್ತು.
ಈ ಸಲ ಕಾಂಗ್ರೇಸ್ಸಿಗೆ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ವಾಲ್ಮೀಕಿ ಹಗರಣ ಕ್ಷೇತ್ರದಲ್ಲಿ ಸದ್ದು ಮಾಡಿತ್ತು. ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಹೋದಲ್ಲೆಲ್ಲ ಅದನ್ನೇ ಪ್ರಸ್ತಾಪ ಮಾಡುತ್ತ ಹೊರಟಿದ್ದರು. ರಾಮುಲು ಹಾಗೂ ಜನಾರ್ಧನ ರೆಡ್ಡಿ ಜುಗಲ್ ಬಂದಿ, ಅಭ್ಯರ್ಥಿ ಗೆಲ್ಲಿಸದೆ ಇದ್ದರು, ಬಿಜೆಪಿ ಮತಗಳನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಯ್ತು.
ಬಿಜೆಪಿಗೆ ಈ ಹಿಂದೆ ಸಾರ್ವತ್ರಿಕ ಚುನಾವಣೆ ಹಾಗೂ ನಿನ್ನೇ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಬಂದಿರುವ ಮತಗಳನ್ನು ನೋಡೋದಾದ್ರೆ
ಉಪ ಚುನಾವಣೆಯಲ್ಲಿ, ಸಂಸದ ತುಕಾರಾಮರ ಪತ್ನಿ, ಅನ್ನಪೂರ್ಣ ವಿರುದ್ಧ ಸ್ಪರ್ಧೆ ಮಾಡಿದ್ದ ಬಿಜೆಪಿಯ ಬಂಗಾರು ಹನುಮಂತ 83967 ಮತಗಳನ್ನು ಪಡೆದಿದ್ದು, ಕೇವಲ 9964 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.
2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಈ ತುಕಾರಾಮ 85223 ಮತಗಳನ್ನು ಪಡೆದು ಆಯ್ಕೆಯಾಗಿ, 35522 ಅಂತರದಿಂದ ಗೆಲುವು ತನ್ನದಾಗಿಸಿಕೊಂಡಿದ್ದರು.
ಕಾಂಗ್ರೇಸ್ಸಿಗೆ ಗೆಲುವಿನ ಅಂತರ ಕಡಿಮೆಯಾಗಿದ್ದು, ಬಿಜೆಪಿ ಈ ಕ್ಷೇತ್ರದಲ್ಲಿ ಸೋತರು ಮತಗಳನ್ನು ಹೆಚ್ಚಿಸಿಕೊಂಡಿದೆ. ಈ ಮೂಲಕ ಕ್ಷೇತ್ರದ ಮತದಾರರು ಕಾಂಗ್ರೇಸ್ಸಿಗೆ ಎಚ್ಚರಿಕೆಯ ಘಂಟೆ ರವಾನೆ ಮಾಡಿದ್ದಾರೆ.