ಪ್ರೊಫೆಸರ್ ಭಗವಾನ ಅವರ ಮುಖಕ್ಕೆ ಕೋರ್ಟ ಆವರಣದಲ್ಲಿ ಮಸಿ ಬಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀರಾ ರಾಘವೇಂದ್ರ ಮೂರು ತಿಂಗಳ ಕಾಲ ದೇಶದಲ್ಲಿ ಯಾವದೇ ನ್ಯಾಯಾಲಯದಲ್ಲಿ ವಕೀಲಿಕೆ ಮಾಡುವಂತಿಲ್ಲ ಎಂದು ವಕೀಲರ ಪರಿಷತ್ ನಿಷೇಧ ಹೇರಿದೆ.
2021ರ ಫೆಬ್ರುವರಿ 4ರಂದು ಕೇಸ್ ಒಂದಕ್ಕೆ ಸಂಬಂಧಿಸಿದಂತೆ ಭಗವಾನ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಕೋರ್ಟ ಕಲಾಪ ಮುಗಿಸಿಕೊಂಡು ಹೊರಬರುತ್ತಿದ್ದ ಪ್ರೊಫೆಸರ್ ಭಗವಾನ ಅವರ ಮುಖಕ್ಕೆ ವಕೀಲೆ ಮೀರಾ ರಾಘವೇಂದ್ರ ಮಸಿ ಬಳೆದಿದ್ದರು.
ಇದು ರಾಜ್ಯದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ಮೇಲೆ ಆಕ್ರೋಶ ಕೇಳಿ ಬಂದಿತ್ತು. ಭಗವಾನ ಅವರು ಸಹ, ಮೀರಾ ಮೇಲೆ ವಕೀಲರ ಪರಿಷತ್ ನಲ್ಲಿ ದೂರು ಧಾಖಲು ಮಾಡಿದ್ದರು.
ಮೀರಾ ರಾಘವೇಂದ್ರ, ಶಿಸ್ತು ಉಲ್ಲಂಘನೆ ಮಾಡಿದ್ದಾರೆ ಎಂದು ನಿರ್ಧರಿಸಿ, ರಾಜ್ಯ ವಕೀಲರ ಪರಿಷತ್, ಮೀರಾ ಅವರ ಸನ್ನದು ಅಮಾನತ್ತಿನಲ್ಲಿಟ್ಟಿದೆ. ಅಲ್ಲದೇ ಮೂರು ತಿಂಗಳು ದೇಶದ ಯಾವದೇ ನ್ಯಾಯಾಲಯದಲ್ಲಿ ವಕೀಲಿಕೆ ನಡೆಸದಂತೆ ನಿರ್ಭಂದ ಹೇರಿದೆ.