ಪ್ರಸಿದ್ಧ ಧಾರ್ಮಿಕ ಸ್ಥಳ ಅಜ್ಮಿರ್ ದರ್ಗಾ ಕುರಿತು ಇದೀಗ ಹೊಸ ವಿವಾದ ಸೃಷ್ಟಿಯಾಗಿದೆ. ಅಜ್ಮಿರ್ ದರ್ಗಾ, ಇದು ಶಿವನ ದೇವಾಲಯವೆಂದು ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಎಂಬುವವರು ಕೋರ್ಟ ಮೆಟ್ಟಲೇರಿದ್ದಾರೆ.
ದರ್ಗಾದಲ್ಲಿ ಹಿಂದೂ ದೇವಾಲಯ ಇದೆ ಎಂದು ಹೇಳಿ ನ್ಯಾಯಾಲಯ ಮೆಟ್ಟಲೇರಿದ್ದು, ಕೋರ್ಟ ಅರ್ಜಿ ಸ್ವೀಕರಿಸಿದೆ ಮತ್ತು ನೋಟಿಸ್ ಜಾರಿ ಮಾಡಲಾಗಿದೆ. ಅರ್ಜಿಯ ವಿಚಾರಣೆ ಡಿಸೆಂಬರ್ 20 ರಂದು ಅಜ್ಮಿರ್ ಕೋರ್ಟನಲ್ಲಿ ನಡೆಯಲಿದೆ.