ಧಾರವಾಡ ಸಮೀಪದ ಗರಗ ಗ್ರಾಮದಲ್ಲಿ ಇಂದು ಸಂಜೆ ಭೀಕರ ಕೊಲೆ ನಡೆದಿದೆ. ಮನೆಯಲ್ಲಿದ್ದ ಗಿರೀಶ್ ಕರಡಿಗುಡ್ಡ ಎಂಬುವವರನ್ನು ಕೊಲೆ ಮಾಡಲಾಗಿದೆ.
ಮನೆಯಲ್ಲಿ ಗಿರೀಶ್ ಒಬ್ಬರೆ ಇರುವದನ್ನು ನೋಡಿಕೊಂಡು ಕೊಲೆ ಮಾಡಲಾಗಿದೆ. ಕೊಲೆಗೆ ಹಳೆಯ ವೈಷಮ್ಯ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.
ಕಳೆದ ಒಂದು ವರ್ಷದ ಹಿಂದೆ, ಧಾರವಾಡ ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ಗರಗ ಗ್ರಾಮದ ಬಸವರಾಜ ಅಲಿಯಾಸ್ ಬಸ್ಯಾ ಹಾಗೂ ಈಗ ಕೊಲೆಯಾಗಿರುವ ಗಿರೀಶ್ ಕರಡಿಗುಡ್ಡರ ನಡುವೆ ಸಣ್ಣ ಜಗಳ ನಡೆದಿದ್ದನ್ನು ಬಿಟ್ಟರೆ, ಮತ್ಯಾರ ಜೊತೆಯೂ ಗಿರೀಶ್ ವೈಷಮ್ಯ ಹೊಂದಿದ್ದಿಲ್ಲ ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸ ಇನ್ಸಪೆಕ್ಟರ ಸಮೀರ ಮುಲ್ಲಾ ಧಾವಿಸಿದ್ದು, ತನಿಖೆ ನಡೆಸಿದ್ದಾರೆ.