ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಪ್ರತಿಷ್ಟಿತ ಬ್ಯಾಂಕ್ಕೊಂದು ಆರ್ಥಿಕ ಸಂಕಷ್ಟದಲ್ಲಿದೆ. ಬೆಳಗಾವಿ ಮೂಲದ ಕಿತ್ತೂರ ರಾಣಿ ಚೆನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ಧ ಸಹಕಾರಿ ಲಿಮಿಟೆಡ್ ದಿವಾಳಿಗೇಳುವ ಸ್ಥಿತಿಯಲ್ಲಿದೆ.
ಬ್ಯಾಂಕ್ ನಲ್ಲಿ ಡೆಪಾಸಿಟ್ ಇಟ್ಟೋರು ಕಣ್ಣಿರು ಹಾಕುತ್ತಿದ್ದಾರೆ. ಈ ಸೌಹಾರ್ಧ ಬ್ಯಾಂಕು ರಾಜ್ಯದಲ್ಲಿ 120 ಶಾಖೆಗಳನ್ನು ಹೊಂದಿದ್ದು, ಡೆಪಾಸಿಟ್ ಇಟ್ಟೋರಿಗೆ ಮರಳಿ ಹಣ ಕೊಡಲು ಅಲೆದಾಡಿಸುತ್ತಿದೆ.
ಧಾರವಾಡದಲ್ಲಿಯೇ 7 ಶಾಖೆಗಳಿದ್ದು, ಧಾರವಾಡದ ಸಪ್ತಾಪುರ ಶಾಖೆಯಲ್ಲಿ 1500 ಜನ ಡೆಪಾಸಿಟ್ ಇಟ್ಟಿದ್ದಾರೆ. ಅವರ ಒಟ್ಟು ಮೊತ್ತ ಮೂರು ಕೋಟಿಯಷ್ಟು ಹಣ ಡೆಪಾಸಿಟ್ ಇಟ್ಟಿದ್ದಾರೆ. ಡೆಪಾಸಿಟ್ ಇಟ್ಟೋರು ಹಣ ವಾಪಸ ಪಡೆಯಲು ಹೋದರೆ, ಹಣ ಇಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಹೇಳುತ್ತಿದ್ದಾರೆ.
ರಾಜ್ಯದಲ್ಲಿ 120 ಶಾಖೆಗಳಿದ್ದು, ಸುಮಾರು 40 ಸಾವಿರ ಜನ ಡೆಪಾಸಿಟ್ ಇಟ್ಟಿದ್ದಾರೆ. ಡೆಪಾಸಿಟ್ ಇಟ್ಟ ಹಣವೇ ಅಂದಾಜು ಸುಮಾರು 800 ಕೋಟಿ ಎನ್ನಲಾಗಿದೆ.
ಡೆಪಾಸಿಟ್ ಇಟ್ಟಿರುವ ಹಣವನ್ನು ಆಡಳಿತ ಮಂಡಳಿಯ ಕೆಲವರು ರಿಯಲ್ ಎಸ್ಟೇಟನಲ್ಲಿ ತೊಡಗಿಸಿದ್ದಾರೆ ಎನ್ನಲಾಗಿದ್ದು, ಗ್ರಾಹಕರು ಫೆಡರೇಷನ್ ಗೆ ದೂರು ಕೊಟ್ಟಿದ್ದಾರೆ.
ವಿ ಎಸ್ ಸಾಧುನವರ ಅಧ್ಯಕ್ಷತೆಯ ಕಿತ್ತೂರ ರಾಣಿ ಚೆನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕಿನಲ್ಲಿ ಹಣ ಇಟ್ಟವರು ಇದೀಗ ಹೊಯ್ಕೋಳುದೊಂದೆ ಬಾಕಿ ಇದೆ.