ಹಲವು ವರ್ಷಗಳಿಂದ ಬೆರ್ಪಟ್ಟು, ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ 6 ಜೋಡಿಗಳನ್ನು ಒಂದು ಮಾಡುವಲ್ಲಿ ಉಡುಪಿಯಲ್ಲಿ ನಡೆದ ಲೋಕ ಅದಾಲತ್ ಯಶಸ್ವಿಯಾಗಿದೆ.
ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ ಗಂಗಣ್ಣವರ ಹಾಗೂ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಮಧ್ಯಸ್ತಿಕೆ ವಹಿಸಿ, 6 ಜೋಡಿಗಳ ಭಿನ್ನಾಭಿಪ್ರಾಯ ಬಗೆಹರಿಸಿ, ಗಂಡ ಹೆಂಡತಿಯನ್ನು ಕೂಡಿಸಿದ್ದಾರೆ.
ಗೋಪಾಲ ಶೆಟ್ಟಿ ಮತ್ತು ಆಶಾಲತಾ ಶೆಟ್ಟಿ, ಅದೇ ರೀತಿ ರಾಘವೇಂದ್ರ ಆಚಾರ್ಯ ಮತ್ತು ಮಾಲತಿ ದಂಪತಿ, ಹಾಗೂ ಕರ್ನಾನಂದ ಮತ್ತು ಕೀರ್ತಕುಮಾರಿ ದಂಪತಿಗಳು ಒಂದಾಗಿ ಬಾಳಲು ಸಮ್ಮತಿ ಸೂಚಿಸಿದರು.