ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲೆಂದು ಕರೆಯಲಾಗುವ ಬೆಳಗಾವಿ ಚಳಿಗಾಲದ ಅಧಿವೇಶನ ಇಂದಿನಿಂದ ಮತ್ತೆ ಆರಂಭಗೊಳ್ಳಲಿದೆ.
ಎರಡನೇ ವಾರದ ಕಲಾಪ ಇಂದು ಆರಂಭವಾಗಲಿದೆ. ಸಭಾಧ್ಯಕ್ಷ ಯು ಟಿ ಖಾದರ ಅವರು, ಇಂದಿನಿಂದ ಮೂರು ದಿನ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಲು ಸಮಯ ಕೊಡಲಾಗುವದು ಎಂದು ಹೇಳಿದ್ದಾರೆ.
ಈಗಾಗಲೇ ಪಂಚಮಸಾಲಿ ಹೋರಾಟ, ಲಾಠಿ ಚಾರ್ಜ್, ವಕ್ಫ ಸೇರಿದಂತೆ ಆರೋಪ, ಪ್ರತ್ತ್ಯಾರೋಪಗಳಿಗೆ ಕಲಾಪ ಸಾಕ್ಷಿಯಾಗಿದೆ.
ಇಂದಿನಿಂದ ಆದರು ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಕಲಾಪದಲ್ಲಿ ಚರ್ಚೆಯಾಗತ್ತಾ ಅನ್ನೋದನ್ನು ನೋಡಬೇಕಿದೆ.