ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವಂಚನೆ ಮಾಡುತ್ತಿರುವವರ ಸಂಖ್ಯೆ ಬೆಳೆಯುತ್ತಿದೆ.
ಇದೀಗ ಸೈಬರ್ ಕಳ್ಳರ ಹಾವಳಿ ಜೋರಾಗಿದೆ. ಮೊಬೈಲ್ ಸಂಖ್ಯೆಗೆ ಕರೆ ಮಾಡುವ ವಂಚಕರು ಬ್ಯಾಂಕ್ ಖಾತೆ ನವೀಕರಿಸಬೇಕೆಂದು ಹೇಳಿ ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶ ಕಳಿಸುತ್ತಾರೆ.
ಹಾಗೇ ಏನಾದರು ಅವರು, ನಿಮ್ಮ ವಾಟ್ಸಪ್ ಗೆ ಕಳಿಸಿದ ಸಂದೇಶವನ್ನು ನೀವು ಡೌನ್ ಲೋಡ್ ಮಾಡಿದರೆ, ನಿಮ್ಮ ಕಥೆ ಮುಗಿದಂತೆ. ಮೊದಲಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಕದಿಯುವ ವಂಚಕರು, ನಿಮ್ಮ ಮೊಬೈಲ್ ನಲ್ಲಿರುವ ದೂರವಾಣಿ ಸಂಖ್ಯೆಗಳಿಗೆ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಾರೆ. ಅದು ನಿಮ್ಮ ನಂಬರಿನಿಂದಲೇ ಸಂದೇಶಗಳು ರವಾನೆಯಾಗುತ್ತವೆ.
ಇಂತಹ ಘಟನೆ ಧಾರವಾಡದಲ್ಲಿ ನಡೆದಿದ್ದು, ಮಹಿಳಾ ಅಧಿಕಾರಿಯೊಬ್ಬರ ಮೊಬೈಲ್ ಸಂಖ್ಯೆಯಿಂದ ಅವರ ಫೋನ್ ಕಾಲ್ ಲಿಸ್ಟ್ ನಲ್ಲಿರುವ ನಂಬರಗಳಿಗೆ ಅಶ್ಲೀಲ ಸಂದೇಶ ಹೋಗುತ್ತಿವೆ.
ವಂಚಕರು ಮೊದಲಿಗೆ ಬ್ಯಾಂಕ್ ಖಾತೆ ನವೀಕರಣ ಮಾಡಬೇಕು ಎಂದು ಸಂದೇಶ ಕಳಿಸಿ, ನಂತರ apk ಫೈಲ್ ಡೌನ್ ಲೋಡ್ ಮಾಡುವಂತೆ ಹೇಳುತ್ತಾರೆ. ಕೆಲವರಿಗೆ ಗೊತ್ತಾಗದೆ ಡೌನ್ ಲೋಡ್ ಮಾಡಿಕೊಂಡಿದ್ದಾರೆ.
ದಯವಿಟ್ಟು apk ಫೈಲ್ ಡೌನ್ ಲೋಡ್ ಮಾಡದಂತೆ ಮತ್ತು ಅಪರಿಚಿತರ ವಿಡಿಯೋ ಕಾಲ್ ಗಳನ್ನು ಸ್ವೀಕರಿಸದಂತೆ ಕಾಲಕಾಲಕ್ಕೆ ಪೊಲೀಸ್ ಇಲಾಖೆ ಎಚ್ಚರಿಕೆ ಕೊಡುತ್ತಿದೆ. ಅದನ್ನು ಪಾಲಿಸುವಂತೆ ಕರ್ನಾಟಕ ಫೈಲ್ಸ್ ಮನವಿ ಮಾಡಿಕೊಳ್ಳುತ್ತದೆ.