ಶಾಲಾ ಬಸ್ಸಿನ ಟೈಯರಗೆ ಗಾಳಿ ತುಂಬಿಸುವಷ್ಟರಲ್ಲಿ ಟೈಯರ್ ಸ್ಫೋಟಗೊಂಡ ಪರಿಣಾಮ ಯುವಕನೊಬ್ಬ ಎಗರಿ ಬಿದ್ದ ಘಟನೆ ಉಡುಪಿ ಸಮೀಪ ನಡೆದಿದೆ.
ಈ ಘಟನೆ ಡಿಸೆಂಬರ್ 21 ರಂದು ನಡೆದಿದ್ದು, ಸಿ ಸಿ ಟಿ ವಿ ದೃಶ್ಯ ಇದೀಗ ವೈರಲ್ ಆಗಿದೆ. 19 ವರ್ಷದ ರಜೀದ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಶಾಲಾ ಬಸ್ಸಿನ ಟೈಯರ್ ಗೆ ಗಾಳಿ ತುಂಬಿಸಲು ಪಂಚರ್ ಅಂಗಡಿಯವ ಟೈಯರ್ ಗೆ ಗಾಳಿ ತುಂಬಿಸಿದ್ದಾನೆ. ಟೈಯರ್ ನಲ್ಲಿ ಹೆಚ್ಚು ಗಾಳಿ ತುಂಬಿದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ.
