ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪರಿಣಾಮ ಆತ ಸಾವನ್ನಪ್ಪಿದ ಘಟನೆ ಹಾನಗಲ್ ತಾಲೂಕಿನ ಕೊಪ್ಪರಿಸಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕಂಬಕ್ಕೆ ಕಟ್ಟಿ, ಕೊರಳಿಗೆ ಚಪ್ಪಲಿ ಹಾರ ಹಾಕಿ, ಕಾಲಿನ ಬುಡಕ್ಕೆ ಬೆಂಕಿಯಿಟ್ಟು ಆತನ ಸಾವಿಗೆ ಕಾರಣರಾದ 7 ಜನರ ಮೇಲೆ ಹಾನಗಲ್ ಠಾಣೆಯಲ್ಲಿ ದೂರು ಧಾಖಲಾಗಿದೆ.
ಪ್ರಕಾಶ ಎಂಬಾತ ಮೃತ ದುರ್ದೈವಿಯಾಗಿದ್ದು, ಹಲ್ಲೆ ನಡೆಸಿದ 7 ಜನರನ್ನು ಹಾನಗಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.