ಭೂ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಬಂದಿದ್ದ ಯುವಕನೊಬ್ಬ ಠಾಣೆಯಲ್ಲಿಯೇ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ ಘಟನೆ ಮಂಡ್ಯದ ಪಾಂಡವಪುರದಲ್ಲಿ ನಡೆದಿದೆ.
ಭೂ ವಿವಾದದ ಕುರಿತು ಸಾಗರ ಎಂಬಾತನ ಮೇಲೆ ಆತನ ಸಂಬಂಧಿಕರು ದೂರು ನೀಡಿದ್ದರು. ಹೀಗಾಗಿ ಸಾಗರನನ್ನು ಠಾಣೆಗೆ ಕರೆಸಲಾಗಿತ್ತು. ಅಲ್ಲಿಯೇ ಇದ್ದ ಪೊಲೀಸರ ಮೇಲೆ ಜಗಳ ತೆಗೆದ ಸಾಗರ, ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾನೆ ಎಂದು ಆರೋಪ ಹೊರಿಸಿ, ಪ್ರಕರಣ ಧಾಖಲಿಸಿಕೊಂಡಿರುವ ಪೊಲೀಸರು ಸಾಗರನನ್ನು ಬಂಧಿಸಿದ್ದಾರೆ.
ಸಾಗರ, ಪುರಸಭೆ ಮಾಜಿ ಅಧ್ಯಕ್ಷನ ಮಗ ಎಂದು ಹೇಳಲಾಗಿದೆ. ಪೊಲೀಸ ಹಾಗೂ ಸಾಗರ ನಡುವೆ ಹೊಡೆದಾಟ ನಡೆದ ವಿಡಿಯೋ ವೈರಲ್ ಆಗಿದೆ
