ಹುಬ್ಬಳ್ಳಿ ಧಾರವಾಡ ನಡುವೆ ಸಂಚರಿಸುವ ಕಿಲ್ಲರ್ ಬಿ ಆರ್ ಟಿ ಎಸ್ ನ್ ಚಿಗರಿ ಬಸ್ಸು ಧಾರವಾಡ ಟೋಲ್ ನಾಕಾ ಬಳಿ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಟೋಲ್ ನಾಕಾ BRTS ರಸ್ತೆಯಲ್ಲಿ ಒಂದು ತಿಂಗಳಲ್ಲಿ ನಡೆದ ಮೂರನೇ ಅಪಘಾತ ಇದಾಗಿದೆ.
ಯಮರಾಜನಂತೆ ಹುಬ್ಬಳ್ಳಿ ಧಾರವಾಡ ನಡುವೆ ಸಂಚರಿಸುವ BRTS ಯೋಜನೆ ತಂದವರಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.
ಇಂದು ರಾತ್ರಿ ಚಿಗರಿ ಬಸ್ಸು ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದ್ದು, ಅದೇ ಬಸ್ಸಿನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
