ಪರ ರಾಜ್ಯದ ವಿಧ್ಯಾರ್ಥಿಗಳು, ಕರ್ನಾಟಕದಲ್ಲಿ ಕರ್ನಾಟಕದ ಮೀಸಲಾತಿ ಪಡೆದು ನೌಕರಿ ಗಿಟ್ಟಿಸುವ ಘಾತುಕ ಕೆಲಸ ನಡೆದಿರುವದು ಬೆಳಕಿಗೆ ಬಂದಿದೆ.
SSC ಹಾಗು GD ಪರೀಕ್ಷೆಯಲ್ಲಿ ಬೇರೆ ರಾಜ್ಯದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕಟ್ ಆಫ್ ಕಡಿಮೆ ನಿಲ್ಲತ್ತೆ ಅನ್ನೋ ಕಾರಣಕ್ಕೆ, ಅಧಿಕಾರಿಗಳಿಗೆ ಲಂಚ ಕೊಟ್ಟು, ರಹವಾಸಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಅನ್ನೋ ಸ್ಪೋಟಕ ಮಾಹಿತಿ ಧಾಖಲೆ ಸಮೇತ ಕರ್ನಾಟಕ ಫೈಲ್ಸ್ ಗೆ ಲಭ್ಯವಾಗಿದೆ.
ಪರ ರಾಜ್ಯದ ಕಿರಾತಕರು ಕರ್ನಾಟಕದವರು ಅಂತ ಪ್ರಮಾಣ ಪತ್ರ ಪಡೆದು, ಕನ್ನಡಿಗರಿಗೆ ಮೀಸಲಿಟ್ಟ ಹುದ್ದೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಆಶ್ಚರ್ಯವೆಂದರೆ, ಉತ್ತರ ಪ್ರದೇಶದಲ್ಲಿ SSLC ಹಾಗೂ PUC ಪರೀಕ್ಷೆ ಪಡೆದ ವಿದ್ಯಾರ್ಥಿಯೊಬ್ಬ ಧಾರವಾಡ ತಹಸೀಲ್ದಾರ ಕಚೇರಿಯಲ್ಲಿ ಧಾರವಾಡದ ರಹವಾಸಿ ಪ್ರಮಾಣ ಪತ್ರ ಪಡೆದಿದ್ದಾನೆ.
ಪರ ರಾಜ್ಯದ ವಿಧ್ಯಾರ್ಥಿಗಳು ಹೇಗೆ ಕರ್ನಾಟಕದಲ್ಲಿ ರಹವಾಸಿ ಪ್ರಮಾಣ ಪತ್ರ ಪಡೆಯುತ್ತಾರೆ ಅನ್ನೋದನ್ನ, ನಾಳೆ ಕರ್ನಾಟಕ ಫೈಲ್ಸ್ ಧಾಖಲೆ ಸಮೇತ ಸುದ್ದಿ ಭಿತ್ತರಿಸಲಿದೆ.