ಧಾರವಾಡ ಜಿಲ್ಲೆಯಲ್ಲಿ ಜನಪರ ಕೆಲಸ ಮಾಡುತ್ತ, ಜನತೆಯ ಮನಸ್ಸು ಗೆದ್ದಿರುವ ದಕ್ಷ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರನ್ನು ಯಾಮಾರಿಸುವ ಕೆಲಸ ಅಧಿಕಾರಿಗಳಿಂದಲೇ ನಡೆಯುತ್ತಿದೆ.
ಧಾರವಾಡ ಜಿಲ್ಲಾಧಿಕಾರಿಗಳ ವ್ಯಾಪ್ತಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಅಧಿಕೃತ ಧಾಖಲೆಗಳು ಕರ್ನಾಟಕ ಫೈಲ್ಸ್ ಗೆ ಲಭ್ಯವಾಗಿವೆ.
ಧಾರವಾಡ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದ ನಂತರ ದಿವ್ಯ ಪ್ರಭು ಅವರು ಪಾರದರ್ಶಕತೆ ಕಾಯ್ದುಕೊಂಡಿದ್ದು, ಉತ್ತಮ ಜಿಲ್ಲಾಧಿಕಾರಿಯಾಗಿ ಹೊರಹೊಮ್ಮಿದ್ದಾರೆ.
ಅಂತಹ ಜಿಲ್ಲಾಧಿಕಾರಿಗಳನ್ನು ಯಾಮಾರಿಸುವ ಹಂತಕ್ಕೆ ಅಧಿಕಾರಿಗಳು ಬಂದು ನಿಂತಿದ್ದು, ನಾಳೆ ಕರ್ನಾಟಕ ಫೈಲ್ಸ್ ಎಲ್ಲವನ್ನು ಬಯಲು ಮಾಡಲಿದೆ.