ಅಂಬೇಡ್ಕರ ಅವರ ಕುರಿತು ಲಘುವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಇದೇ ತಿಂಗಳು 9 ರಂದು ವಿವಿಧ ಸಂಘಟನೆಗಳು ಧಾರವಾಡ ಬಂದ್ ಗೆ ಕರೆ ಕೊಟ್ಟಿವೆ.
ಅಂದು ಹುಬ್ಬಳ್ಳಿಯಲ್ಲಿಯೂ ಬಂದ್ ಗೆ ಕರೆ ಕೊಟ್ಟಿದ್ದು, ಹುಬ್ಬಳ್ಳಿ ಧಾರವಾಡ ಅವಳಿ ನಗರ ಬಂದ್ ಆಗಲಿವೆ.
ಇಂದು ಧಾರವಾಡದಲ್ಲಿ ಸಭೆ ನಡೆಸಿದ ಸಂಘಟನೆಗಳ ಮುಖಂಡರು ಧಾರವಾಡ ಬಂದ್ ಗೆ ಎಲ್ಲರೂ ಸಾಥ ಕೊಡಬೇಕೆಂದು ಮನವಿ ಮಾಡಿದರು.
ಅವಳಿ ನಗರದಲ್ಲಿ ಜನಜೀವನ ಅಸ್ತವ್ಯಸ್ತ ಸಾಧ್ಯತೆ
ವಿವಿಧ ಸಂಘಟನೆಗಳು ಅಮಿತ್ ಶಾ ಹೇಳಿಕೆ ಖಂಡಿಸಿ ಅವಳಿ ನಗರ ಬಂದ್ ಗೆ ಕರೆ ಕೊಟ್ಟಿದ್ದು, ಅಂದು ಅವಳಿ ನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.
ಬಂದ್ ಹಿನ್ನೆಲೆಯಲ್ಲಿ ಅವಳಿ ನಗರದಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಬಗ್ಗೆ ಜಿಲ್ಲಾಡಳಿತ ಇನ್ನುವರೆಗೆ ಯಾವದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.